ಹಾಟ್​ ಬ್ಯೂಟಿ ಪಾಯಲ್ ರಜಪೂತ್

ರಮೇಶ್​ ಕುಮಾರ್​​ ಬಿ ಎಡಮೋಳೆ

ಹಾಟ್​ ಬ್ಯೂಟಿ ಪಾಯಲ್ ರಜಪೂತ್

ಟಾಲಿವುಡ್​ ಬ್ಯೂಟಿ ಪಾಯಲ್​ ರಜಪೂತ್​ ರೇಷ್ಮೆ ಸೀರೆಯುಟ್ಟು ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ಪೋಸ್​ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಬಹುಭಾಷಾ ನಟಿ

ಪಾಯಲ್ ರಜಪೂತ್ ಮುಖ್ಯವಾಗಿ ತೆಲುಗು ಮತ್ತು ಪಂಜಾಬಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಆರ್‌.ಎಕ್ಸ್. 100 ಖ್ಯಾತಿ

2018ರಲ್ಲಿ ತೆರೆಕಂಡ ತೆಲುಗಿನ 'RX 100' ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ನೀಡಿತು. ಈ ಚಿತ್ರದ 'ಇಂದು' ಎಂಬ ವಿಭಿನ್ನ ಪಾತ್ರದ ಮೂಲಕ ಅವರು ದಕ್ಷಿಣ ಭಾರತದಲ್ಲಿ ಮನೆಮಾತಾದರು.

ಕಿರುತೆರೆಯಿಂದ ಬೆಳ್ಳಿತೆರೆಗೆ

ಸಿನಿಮಾಗಳಿಗೂ ಮುನ್ನ ಇವರು ಹಿಂದಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. 'ಸಪ್ನೋ ಸೆ ಭರೆ ನೈನಾ' ಮತ್ತು 'ಯೇ ಹೈ ಆಶಿಕಿ' ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು.

ಪಂಜಾಬಿ ಸಿನಿಮಾ ಪ್ರಯಾಣ

ಇವರು 'ಚನ್ನ ಮೇರೆಯಾ' ಎಂಬ ಚಿತ್ರದ ಮೂಲಕ ಪಂಜಾಬಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದು ಮರಾಠಿಯ 'ಸೈರಾಟ್' ಚಿತ್ರದ ರಿಮೇಕ್ ಆಗಿತ್ತು.

ಪ್ರಶಸ್ತಿ ಮತ್ತು ಮನ್ನಣೆ

ತಮ್ಮ ಚೊಚ್ಚಲ ತೆಲುಗು ಚಿತ್ರಕ್ಕೆ ಫಿಲ್ಮ್‌ಫೇರ್ ಸೌತ್ (ದಕ್ಷಿಣ) ಅತ್ಯುತ್ತಮ ಪದಾರ್ಪಣೆ ನಟಿ ಪ್ರಶಸ್ತಿಯನ್ನು ಒಳಗೊಂಡಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸೀರೆಯಲ್ಲಿ ಹಾಟ್​

ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ಪಾಯಲ್​ ಅವರು ಎದೆ ಸೀಳು ಕಾಣುವಂತಹ ರವಿಕೆ ಹಾಗೂ ರೇಷ್ಮೆ ಸೀರೆಯಲ್ಲಿ ಕಂಗೊಳ್ಳಿಸಿದ್ದಾರೆ. ಆಕೆಯ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.