ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮ ಮುಖವು ಹೊಳೆಯುವಂತೆ ಹಾಗೂ ಸೌಂದರ್ಯದಿಂದ ಕಾಣುವಂತೆ ಮಾಡಲು ಹಲವಾರು ಕ್ರೀಮ್ಗಳ ಮೊರೆಹೋಗುತ್ತಾರೆ..ನೀರು ಚರ್ಮದ ಅತ್ಯುತ್ತಮ ಸ್ನೇಹಿತ. ದಿನವಿಡೀ ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯುವುದರಿಂದ ನಿಮ್ಮ ಚರ್ಮವು ಹೊಳೆಯುವಂತೆ ಮಾಡುತ್ತದೆ..ಸ್ವಚ್ಛವಾದ ಚರ್ಮವು ಆರೋಗ್ಯಕರ ಹೊಳಪಿನ ಅಡಿಪಾಯವಾಗಿದೆ. ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವಂತಹ ಕ್ಲೆನ್ಸರ್ಗಳನ್ನು ದಿನಕ್ಕೆ 2 ಸಲ ಬಳಸಿ ಮುಖ ತೊಳೆಯಿರಿ..ಮುಖದಲ್ಲಿ ಕೂರುವ ಧೂಳಿನಿಂದ ಚರ್ಮವು ಆದಷ್ಟು ಹದಗೆಡುತ್ತದೆ. ಹಾಗಾಗಿ ಅವುಗಳನ್ನು ತೆಗೆದುಹಾಕಲು ಸ್ಕ್ರಬ್ ಮಾಡಿ..ಪೌಷ್ಟಿಕಾಂಶ ಆಹಾರಗಳಾದ ಕಾಳುಗಳು, ಹಸಿರು ತರಕಾರಿಗಳು, ಹಣ್ಣುಗಳು ಇವುಗಳನ್ನು ಸೇವಿಸುವುದರಿಂದ ಚರ್ಮವು ಹೊಳೆಯುತ್ತದೆ..ಚರ್ಮವನ್ನು ರಿಫ್ರೆಶ್ ಮಾಡಲು ಹಾಗೂ ಹೊಳೆಯುವಂತೆ ಮಾಡಲು ನೈಸರ್ಗಿವಾದಂತಹ ಫೇಸ್ ಮಾಸ್ಕ್ಗಳನ್ನು ಬಳಸಿ.