ಈ ಸಣ್ಣ ತಪ್ಪು ನೆಮ್ಮದಿ ಕೆಡಿಸಬಹುದು! ಇಂದೇ ತಿದ್ದಿಕೊಳ್ಳಿ..
ಸವಿನಾ ನಾಯ್ಕ
ಈ ಸಣ್ಣ ತಪ್ಪು ನೆಮ್ಮದಿ ಕೆಡಿಸಬಹುದು! ಇಂದೇ ತಿದ್ದಿಕೊಳ್ಳಿ..
ಸಂಸಾರ ಎಂಬ ನೌಕೆ ಸುಗಮವಾಗಿ ಸಾಗಬೇಕೆಂದರೆ ಪತಿ-ಪತ್ನಿಯರ ನಡುವೆ ಪರಸ್ಪರ ಗೌರವ ಮತ್ತು ತಿಳುವಳಿಕೆ ಬಹಳ ಮುಖ್ಯ. ಯಾವುದೇ ಕೆಟ್ಟ ಉದ್ದೇಶವಿಲ್ಲದೆ ಮಾಡುವ ಕೆಲವು ಕೆಲಸಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು.
ಭಾವನೆಗಳಿಗೆ ಬೆಲೆ ನೀಡದಿರುವುದು
ದಂಪತಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಇಬ್ಬರು ಮುಂದೆ ಬಂದಾಗ, ಅದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು, ನಿರ್ಲಕ್ಷಿಸುವುದು ಮಾನಸಿಕವಾಗಿ ಕುಗ್ಗಿಸುತ್ತದೆ. ಇದು ಇಬ್ಬರಿಗೂ ಒಂಟಿತನವನ್ನು ಮೂಡಿಸಬಹುದು.
ಟೀಕೆ ಮಾಡುವುದು
ಏನಾದರೂ ತಪ್ಪಾದಾಗ ಅದನ್ನು ನಾಲ್ಕು ಜನರ ಮುಂದೆ ಅಥವಾ ಮನೆಯವರ ಮುಂದೆ ಎತ್ತಿ ತೋರಿಸುವುದು ಆತ್ಮಗೌರವಕ್ಕೆ ಧಕ್ಕೆ ತರುತ್ತದೆ. ಈ ನಡೆ ಪತಿ ಹಾಗೂ ಪತ್ನಿಗೆ ಸಮಾಜದಲ್ಲಿ ಮುಜುಗರ ಉಂಟುಮಾಡಬಹುದು.
ಪ್ರಾಮುಖ್ಯತೆ ನೀಡದಿರುವುದು!
ಮನೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪತ್ನಿ- ಪತಿ ಇಬ್ಬರು ಚರ್ಚೆ ಮಾಡದೆ ಸಲಹೆ ಪಡೆಯದಿರುವುದು ಸಂಬಂಧದಲ್ಲಿ ಪ್ರಾಮುಖ್ಯತೆ ಇಲ್ಲ ಎಂಬ ಭಾವನೆ ಮೂಡಿಸುತ್ತದೆ. ಇದು ದಾಂಪತ್ಯದಲ್ಲಿ ಅಂತರ ಸೃಷ್ಟಿಸಲು ಕಾರಣವಾಗುತ್ತದೆ.
ಹೋಲಿಕೆ ಮಾಡುವುದು!
ಪತ್ನಿಯನ್ನು ಬೇರೆ ಮಹಿಳೆಯರ ಜೊತೆ ಅಥವಾ ಮನೆಯವರ ಜೊತೆ ಹೋಲಿಸಿ ಮಾತನಾಡುವುದು ಅತ್ಯಂತ ದೊಡ್ಡ ತಪ್ಪು. ಇದು ಅವಳಲ್ಲಿ ಕೀಳರಿಮೆ ಬೆಳೆಯುವಂತೆ ಮಾಡುತ್ತದೆ ಮತ್ತು ಮಾನಸಿಕ ಒತ್ತಡಕ್ಕೆ ದಾರಿ ಮಾಡಿಕೊಡುತ್ತದೆ.