ಬಿಸಿಲಿಗೆ ತಂಪು, ದೇಹಕ್ಕೆ ಪಂಪು: ಈ ಚಿಕ್ಕೂ ಮಿಲ್ಕ್ಶೇಕ್ನಲ್ಲಿದೆ ಇಷ್ಟೆಲ್ಲಾ ಪ್ರಯೋಜನ!
ಭಾನುಪ್ರಿಯ ಡಿ.ಕೆ
ಬಿಸಿಲಿಗೆ ತಂಪು, ದೇಹಕ್ಕೆ ಪಂಪು: ಈ ಚಿಕ್ಕೂ ಮಿಲ್ಕ್ಶೇಕ್ನಲ್ಲಿದೆ ಇಷ್ಟೆಲ್ಲಾ ಪ್ರಯೋಜನ!
ಇದು ರುಚಿಕರವಾಗಿ ಆರೋಗ್ಯಕರ ಪಾನೀಯವಾಗಿದ್ದು, ಇದರಲ್ಲಿ ವಿಟಮಿನ್‌ಗಳು, ಖನಿಜಗಳು, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುತ್ತದೆ. ಹಾಲು ಸೇರಿಸಿದಾಗ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಹೆಚ್ಚುತ್ತದೆ.
ದೇಹಕ್ಕೆ ಶಕ್ತಿ ನೀಡುತ್ತದೆ
ಚಿಕ್ಕೂದಲ್ಲಿ ನೈಸರ್ಗಿಕ ಸಕ್ಕರೆಗಳು ಇದ್ದು ತ್ವರಿತ ಎನರ್ಜಿ ಬೂಸ್ಟ್ ನೀಡುತ್ತದೆ. ಬೆಳಗ್ಗೆ ಅಥವಾ ವ್ಯಾಯಾಮದ ನಂತರ ಕುಡಿಯಲು ಉತ್ತಮವಾಗಿದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ
ಹೆಚ್ಚಿನ ಡೈಟರಿ ಫೈಬರ್ ಇದ್ದು ಮಲಬದ್ಧತೆ ನಿವಾರಿಸಿ, ಆರೋಗ್ಯಕರ ಗಟ್ ನಿರ್ವಹಣೆಗೆ ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ವಿಟಮಿನ್ C, A ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ಇಮ್ಯೂನಿಟಿ ಬಲಪಡಿಸುತ್ತದೆ. ಸೀಸನಲ್ ಜ್ವರ, ಸಾಮಾನ್ಯ ರೋಗಗಳಿಂದ ರಕ್ಷಣೆ ನೀಡುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ
ಚಿಕ್ಕೂದಲ್ಲಿ ಕ್ಯಾಲ್ಸಿಯಂ, ಐರನ್, ಫಾಸ್ಫರಸ್ ಮತ್ತು ಹಾಲಿನ ಕ್ಯಾಲ್ಸಿಯಂ ಸೇರಿ ಮೂಳೆಗಳು ಬಲವಾಗುತ್ತವೆ. ಮಕ್ಕಳು ಮತ್ತು ವಯಸ್ಸಾದವರಿಗೆ ಉತ್ತಮವಾಗಿದೆ.
ಚರ್ಮಕ್ಕೆ ಒಳ್ಳೆಯದು
ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ A, C ತ್ವಚೆಯನ್ನು ಆರೋಗ್ಯಕರವಾಗಿ ಇರಿಸಿ, ಕಾಲಜನ್ ಉತ್ಪಾದನೆ ಹೆಚ್ಚಿಸಿ ವಿಂಕಲ್ಸ್ ಕಡಿಮೆ ಮಾಡುತ್ತದೆ.