ಹೀಗಿದೆ ನೋಡಿ ಎಲಾನ್ ಮಸ್ಕ್ ಬಾಡಿಗೆ ಮನೆ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಹೀಗಿದೆ ನೋಡಿ ಎಲಾನ್ ಮಸ್ಕ್ ಬಾಡಿಗೆ ಮನೆ!

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ ಎಲಾನ್ ಮಸ್ಕ್ ಅವರ ಸರಳ ಜೀವನಶೈಲಿ ಎಲ್ಲರ ಗಮನ ಸೆಳೆದಿದೆ. ವಿಶ್ವದ ಮೊದಲ ಟ್ರಿಲಿಯನೇರ್​ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಅಂದರೆ ಅದಕ್ಕಿಂತ ಅಚ್ಚರಿ ಬೇರೊಂದಿಲ್ಲ.

ಸರಳ ಹಾಗೂ ವಿಭಿನ್ನ ಜೀವನಶೈಲಿ

ಜಗತ್ತಿನ ಸಾಂಪ್ರದಾಯಿಕ ಬಿಲಿಯನೇರ್‌ಗಳಿಗಿಂತ ಭಿನ್ನವಾಗಿರುವ ಎಲಾನ್ ಮಸ್ಕ್, ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದರೂ ಐಷಾರಾಮಿ ಬಂಗಲೆಯಲ್ಲಲ್ಲ, ಬದಲಿಗೆ ಅತ್ಯಂತ ಚಿಕ್ಕದಾದ ಪ್ರಿಫ್ಯಾಬ್ರಿಕೇಟೆಡ್ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಮನೆಯ ವಿಸ್ತೀರ್ಣ ಮತ್ತು ವೆಚ್ಚ

ಅಮೆರಿಕದ ಬೊಕಾ ಚಿಕಾದಲ್ಲಿರುವ ಸ್ಪೇಸ್ಎಕ್ಸ್ ಸ್ಟಾರ್‌ಬೇಸ್ ಹತ್ತಿರವಿರುವ ಈ ಪುಟ್ಟ ಮನೆ ಸುಮಾರು 375 ರಿಂದ 400 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದರ ಮೌಲ್ಯ ಅಂದಾಜು 50,000 ಡಾಲರ್ ಆಗಿದೆ.

ಬಾಕ್ಸಾಬಲ್ 'ಕಾಸಿಟಾ' ಮಾಡೆಲ್

ಈ ಮನೆಯು 'ಬಾಕ್ಸಾಬಲ್' ಕಂಪನಿಯು ತಯಾರಿಸಿರುವ 'ಕಾಸಿಟಾ' ಮಾದರಿಯಾಗಿದ್ದು, ಮುಂಚಿತವಾಗಿಯೇ ನಿರ್ಮಿಸಿ ನಮಗೆ ಬೇಕಾದ ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದಾದ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ.

ಮೂಲಭೂತ ಸೌಕರ್ಯಗಳು

ಮನೆ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಹ ಇದರಲ್ಲಿ ಲಿವಿಂಗ್ ಏರಿಯಾ, ಬೆಡ್‌ರೂಮ್, ಅಡುಗೆಮನೆ ಮತ್ತು ಬಾತ್‌ರೂಮ್‌ನಂತಹ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ.

ಜಾಗದ ಸದ್ಬಳಕೆ ಮತ್ತು ತಂತ್ರಜ್ಞಾನ

ಕಡಿಮೆ ಜಾಗದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಈ ಮನೆಯಲ್ಲಿ ಮರ್ಫಿ ಬೆಡ್ (ಮಡಚಬಹುದಾದ ಹಾಸಿಗೆ), ಇನ್-ಬಿಲ್ಟ್ ಸ್ಟೋರೇಜ್ ಮತ್ತು ಪರಿಸರಸ್ನೇಹಿಯಾದ ಇಂಧನ ದಕ್ಷತೆಯ ವಿನ್ಯಾಸಗಳು ಪ್ರಮುಖ ಆಕರ್ಷಣೆಗಳಾಗಿವೆ.

ಐಷಾರಾಮಿ ಮನೆಗಳ ಮಾರಾಟ

ಭವಿಷ್ಯದಲ್ಲಿ ಮಂಗಳ ಗ್ರಹದಲ್ಲಿ ಮಾನವ ವಸಾಹತು ನಿರ್ಮಿಸುವ ತಮ್ಮ ಕನಸನ್ನು ನನಸಾಗಿಸಲು ಸರಳ ಜೀವನಶೈಲಿ ಅಗತ್ಯ ಎಂದು ನಂಬಿರುವ ಮಸ್ಕ್, ಇದೇ ಕಾರಣಕ್ಕಾಗಿ 2020 ರಲ್ಲೇ ತಮ್ಮಲ್ಲಿದ್ದ ಹಲವಾರು ಐಷಾರಾಮಿ ಬಂಗಲೆಗಳನ್ನು ಮಾರಾಟ ಮಾಡಿದ್ದರು.

ಜಾಗತಿಕ ಮಟ್ಟದಲ್ಲಿ ಚರ್ಚೆ

ಸ್ವತಃ ಮಸ್ಕ್ ಅವರೇ "ಅದ್ಭುತ" ಎಂದು ಬಣ್ಣಿಸಿರುವ ಈ ಪರಿಸರಸ್ನೇಹಿ ಹಾಗೂ ಕಡಿಮೆ ವೆಚ್ಚದ ಪುಟ್ಟ ಮನೆ, ವಿಶ್ವದ ನಂಬರ್ ಒನ್ ಶ್ರೀಮಂತನ ವಾಸಸ್ಥಳವಾಗಿರುವುದರಿಂದ ಇಂದು ಇಡೀ ಜಗತ್ತಿನಾದ್ಯಂತ ಭಾರಿ ಚರ್ಚೆಯ ವಿಷಯವಾಗಿದೆ.