ಚಳಿಗಾಲದಲ್ಲಿ ಒಣಗಿದ ತುಟಿಗಳ ಆರೈಕೆಯನ್ನು ಹೀಗೆ ಮಾಡಿ!

Vijayavan

ಚಳಿಗಾಲದಲ್ಲಿ ಒಣಗಿದ ತುಟಿಗಳ ಆರೈಕೆಯನ್ನು ಹೀಗೆ ಮಾಡಿ!

ಚಳಿಗಾಲದಲ್ಲಿ ಶೀತ ಗಾಳಿ, ಒಣ ಹವೆ, ತೇವಾಂಶಗಳಿಂದ ತುಟಿಗಳು ಸುಲಭವಾಗಿ ಒಣಗಿ ಬಿರುಕು ಮೂಡುತ್ತವೆ.

ನಿಯಮಿತವಾಗಿ ಲಿಪ್ ಬಾಮ್ ಹಚ್ಚಿ

ಚಳಿಗಾಲದಲ್ಲಿ ಹಲವು ಬಾರಿ ಪೆಟ್ರೋಲಿಯಂ ಜೆಲ್ಲಿ, ಬಟರ್ ಅಥವಾ ಬೀಸ್‌ವ್ಯಾಕ್ಸ್ ಇರುವ ದಪ್ಪ ಲಿಪ್ ಬಾಮ್ ಬಳಸಿರಿ, ಇದು ತೇವಾಂಶವನ್ನು ಕಡಿಮೆ ಮಾಡಿ ತುಟಿಗೆ ರಕ್ಷಣೆ ನೀಡುತ್ತದೆ.

ಸಿಪ್ಪೆ ತೆಗೆಯಬೇಡಿ

ತುಟಿ ಒಣಗಿದಾಗ ನೆಕ್ಕುವುದು ಸಾಮಾನ್ಯ ಅಭ್ಯಾಸವಾಗಿರುತ್ತದೆ. ಈ ಸಮಯದಲ್ಲಿ ಜನರು ಅವುಗಳ ಸಿಪ್ಪೆಯನ್ನು ತೆಗೆಯುವುದನ್ನು ಮಾಡುತ್ತಾರೆ. ಈ ಅಭ್ಯಾಸವು ಲಾಲಾರಸವನ್ನು ಆವಿಯಾಗಿಸಿ ತುಟಿಯನ್ನು ಒಣಗಿಸುತ್ತದೆ.

ಮನೆಯಲ್ಲಿ ನೈಸರ್ಗಿಕ ಮಾಯಿಶ್ಚರೈಸರ್ ಬಳಸಿ

ಜೇನುತುಪ್ಪ, ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ತುಟಿಗೆ ಹಚ್ಚಿ 10-15 ನಿಮಿಷ ಬಿಟ್ಟು ತೊಳೆಯಿರಿ. ಇದು ನೈಸರ್ಗಿಕವಾಗಿ ತುಟಿಗಳ ಆರೈಕೆ ಮಾಡುತ್ತದೆ.

ಸಾಕಷ್ಟು ನೀರು ಕುಡಿಯಿರಿ

ದೇಹಕ್ಕೆ ಒಳಗಿನಿಂದ ತೇವಾಂಶ ಬೇಕು. ಹಾಗಾಗಿ ದಿನಕ್ಕೆ 3-4 ಲೀಟರ್​ ನೀರು ಕುಡಿಯುವ ಅಭ್ಯಾಸವನ್ನು ಮಾಡಿ. ಇದು ತುಟಿಗಳಿಗೆ ರಕ್ಷಣೆ ನೀಡುತ್ತದೆ.

ಸೌಮ್ಯವಾಗಿ ಸ್ಕ್ರಬ್ ಮಾಡಿ

ವಾರಕ್ಕೊಮ್ಮೆ ಸಕ್ಕರೆ ಮತ್ತು ಜೇನುತುಪ್ಪ ಮಿಶ್ರಣದಿಂದ ತುಟಿಗಳನ್ನು ಸೌಮ್ಯವಾಗಿ ಸ್ಕ್ರಬ್ ಮಾಡಿ. ಇದು ಒಣ ಚರ್ಮವನ್ನು ತೆಗೆದು ಹೊಸ ಮೃದುತ್ವ ತರುತ್ತದೆ.