ಕಲಬೆರಕೆ ಅಡುಗೆ ಎಣ್ಣೆಯನ್ನು ಮನೆಯಲ್ಲೇ ಪತ್ತೆಹಚ್ಚುವುದು ಹೀಗೆ!

ಭಾನುಪ್ರಿಯ ಡಿ.ಕೆ

ಕಲಬೆರಕೆ ಅಡುಗೆ ಎಣ್ಣೆಯನ್ನು ಮನೆಯಲ್ಲೇ ಪತ್ತೆಹಚ್ಚುವುದು ಹೀಗೆ!

ಅಡುಗೆ ಎಣ್ಣೆಯು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಕಲಬೆರಕೆ ಎಣ್ಣೆಯನ್ನು ಪತ್ತೆಹಚ್ಚಲು ಮನೆಯಲ್ಲೇ ಮಾಡಬಹುದಾದ ಸರಳ ಮಾರ್ಗಗಳು ಇಲ್ಲಿವೆ.

ಫ್ರಿಡ್ಜ್ ಟೆಸ್ಟ್

ಒಂದು ಗಾಜಿನ ಲೋಟದಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ 30 ನಿಮಿಷಗಳ ಕಾಲ ಫ್ರಿಡ್ಜ್‌ನಲ್ಲಿ ಇಡಿ. ಎಣ್ಣೆ ಸಂಪೂರ್ಣವಾಗಿ ಗಟ್ಟಿಯಾದರೆ ಅದು ಶುದ್ಧವಾಗಿದೆ. ಮೇಲ್ಪದರದಲ್ಲಿ ದ್ರವ ಉಳಿದರೆ ಅದರಲ್ಲಿ ಕಲಬೆರಕೆಯಾಗಿದೆ ಎಂದರ್ಥ.

ಹನಿ ಪರೀಕ್ಷೆ

ಒಂದು ತಟ್ಟೆಯಲ್ಲಿ ನೀರನ್ನು ತೆಗೆದುಕೊಂಡು ಅದರ ಮೇಲೆ ಒಂದು ಹನಿ ಎಣ್ಣೆಯನ್ನು ಹಾಕಿ. ಶುದ್ಧ ಎಣ್ಣೆಯು ನೀರಿನ ಮೇಲೆ ತೇಲುತ್ತದೆ. ಕಲಬೆರಕೆಯಾಗಿದ್ದರೆ ಅದು ನೀರಿನಲ್ಲಿ ಹರಡಲು ಅಥವಾ ಕರಗಲು ಪ್ರಾರಂಭಿಸುತ್ತದೆ.

ಅಂಗೈ ಪರೀಕ್ಷೆ ಮತ್ತು ವಾಸನೆ

ಸ್ವಲ್ಪ ಎಣ್ಣೆಯನ್ನು ಅಂಗೈಗೆ ಹಾಕಿ ಚೆನ್ನಾಗಿ ಉಜ್ಜಿಕೊಳ್ಳಿ. ಅದರಿಂದ ಕೆಮಿಕಲ್ ಅಥವಾ ಕಮಟು ವಾಸನೆ ಬಂದರೆ, ಅಥವಾ ಕೃತಕ ಬಣ್ಣ ಹತ್ತಿದರೆ ಆ ಎಣ್ಣೆ ಕಲುಷಿತವಾಗಿದೆ ಎಂದು ತಿಳಿಯಬಹುದು.

ಬೆಣ್ಣೆ ಪರೀಕ್ಷೆ

ಸ್ವಲ್ಪ ಎಣ್ಣೆಗೆ ಒಂದು ಚಮಚ ಬೆಣ್ಣೆಯನ್ನು ಸೇರಿಸಿ. ಸ್ವಲ್ಪ ಸಮಯದ ನಂತರ ಎಣ್ಣೆಯ ಬಣ್ಣವು ನೀಲಿ ಅಥವಾ ತಿಳಿ ಹಸಿರು ಬಣ್ಣಕ್ಕೆ ತಿರುಗಿದರೆ, ಅದರಲ್ಲಿ ಹಾನಿಕಾರಕ ಮೇಣ ಬೆರೆಸಲಾಗಿದೆ ಎಂದು ಅರ್ಥ.

ಬಿಸಿ ಮಾಡಿದಾಗ ನೊರೆ ಬರುವುದು

ಬಾಣಲೆಯಲ್ಲಿ ಎಣ್ಣೆ ಕಾಯಿಸುವಾಗ ವಿಪರೀತ ನೊರೆ ಮತ್ತು ದಟ್ಟ ಹೊಗೆ ಬಂದರೆ, ಆ ಎಣ್ಣೆಯನ್ನು ಈಗಾಗಲೇ ಹಲವು ಬಾರಿ ಬಳಸಿ ಮರುಸಂಸ್ಕರಣೆ ಮಾಡಲಾಗಿದೆ ಎಂದು ಅರ್ಥ.