ವೀಸಾ ನೀತಿಯಲ್ಲಿ ಮತ್ತು ಒಂದಷ್ಟು ನಿಯಮಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ
ಥೈಲ್ಯಾಂಡ್ ಪ್ಲ್ಯಾನ್ ಇದ್ಯಾ? ಈ ವಿಚಾರಗಳು ಗೊತ್ತಿರಲಿ
ಪ್ರತಿವರ್ಷ ದೇಶ-ವಿದೇಶಗಳಿಂದ ಥೈಲ್ಯಾಂಡ್‌ಗೆ ಪ್ರವಾಸಿಗರ ದಂಡೇ ಹರಿದಬರುತ್ತದೆ. ಇಲ್ಲಿಗೆ ಪ್ರಯಾಣಿಕರ ಸಂಖ್ಯೆ ಸದಾ ಹೆಚ್ಚು
ಏನಿದು ನಿಯಮ?
ಈ ನಿಯಮ ಹೊಸದೇನಲ್ಲ. ಥೈಲ್ಯಾಂಡ್‌ನ ಅಧಿಕೃತ ಪ್ರವೇಶ ನಿಯಮಗಳ ಪ್ರಕಾರ, ವಿದೇಶಿ ಪ್ರವಾಸಿಗರು ಸಾಕಷ್ಟು ಆರ್ಥಿಕ ಮಾರ್ಗಗಳ ಪುರಾವೆಯನ್ನು ಲಗ್ಗತ್ತಿಸಬೇಕು
20,000 ಥಾಯ್ ಬಹ್ತ್
1. ಪ್ರತಿ ವ್ಯಕ್ತಿಗೆ ಕನಿಷ್ಠ 20,000 ಥಾಯ್ ಬಹ್ತ್
2. ಪ್ರತಿ ಕುಟುಂಬಕ್ಕೆ ಕನಿಷ್ಠ 40,000 ಬಹ್ತ್
ವೀಸಾ ಶುಲ್ಕ ಮತ್ತು ಗಡುವು ವಿವರಗಳು
1. ಪ್ರವೇಶ ವೀಸಾ ಶುಲ್ಕ: 1,000 ಬಹ್ತ್
2. ವೀಸಾ ಸಿಂಧುತ್ವ: 60 ದಿನಗಳ ವಾಸ್ತವ್ಯ ಸಾಧ್ಯ
3. ಅಗತ್ಯವಿದ್ದರೆ ಬ್ಯಾಂಕಾಕ್ ವಲಸೆ ಬ್ಯೂರೋದಲ್ಲಿ ವಿಸ್ತರಣೆ ಸಾಧ್ಯ
ಎಂಎಫ್ಎ ಶಿಫಾರಸು
ಹೆಚ್ಚುವರಿಯಾಗಿ, ಕೆಲವು ದೇಶಗಳ ನಾಗರಿಕರು ಥೈಲ್ಯಾಂಡ್‌ಗೆ ಪ್ರಯಾಣಿಸುವ ಮುನ್ನ ತಮ್ಮ ದೇಶದ ಥಾಯ್ ರಾಯಭಾರ ಕಚೇರಿ ಅಥವಾ ದೂತಾವಾಸದಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಥಾಯ್ ಎಂಎಫ್ಎ ಶಿಫಾರಸು ಮಾಡುತ್ತದೆ.
ಪ್ರಯಾಣಿಕರ ಗಮನಕ್ಕೆ!
ಥೈಲ್ಯಾಂಡ್‌ಗೆ ಆಗಮಿಸುವ ಮೊದಲು ಕನಿಷ್ಠ 20,000 ಬಹ್ತ್ (56,570 ರೂ.) ಕ್ಯಾಶ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ನಿಮ್ಮ ಬಳಿ ಇಟ್ಟುಕೊಂಡಿರಬೇಕು.
ದಾಖಲೆಗಳಲ್ಲಿ ದೋಷಗಳು ಇರಬಾರದು
ನಿರ್ಗಮಿಸುವ ಮೊದಲು ಹತ್ತಿರದ ಥಾಯ್ ರಾಯಭಾರ ಕಚೇರಿ/ದೂತಾವಾಸದಲ್ಲಿ ಇತ್ತೀಚಿನ ವೀಸಾ ನಿಯಮಗಳನ್ನು ಪರಿಶೀಲಿಸುವುದು ಅತ್ಯಗತ್ಯ.