ಹೃದಯದ ಆರೋಗ್ಯಕ್ಕೆ ವರದಾನ ಮೀನಿನ ತಲೆ ಸಾರು!

ಸವಿನಾ ನಾಯ್ಕ

ಹೃದಯದ ಆರೋಗ್ಯಕ್ಕೆ ವರದಾನ ಮೀನಿನ ತಲೆ ಸಾರು!

ಮೀನಿನ ಸಾಂಬಾರ್‌ನಲ್ಲಿರುವ ಮೀನಿನ ತಲೆ (Fish Head) ಸೇವಿಸುವುದು ಕೇವಲ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಮೀನಿನ ದೇಹಕ್ಕಿಂತ ಅದರ ತಲೆಯಲ್ಲಿ ಅತಿ ಹೆಚ್ಚು ಪೋಷಕಾಂಶಗಳಿರುತ್ತವೆ.

ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ

ಮೀನಿನ ತಲೆಯಲ್ಲಿ ಒಮೆಗಾ-3 ಫ್ಯಾಟಿ ಆಸಿಡ್‌ಗಳು (DHA) ಅತ್ಯಂತ ಹೇರಳವಾಗಿವೆ. ಇದು ಮೆದುಳಿನ ಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಅಲ್ಝೈಮರ್‌ನಂತಹ ಮರೆವಿನ ಕಾಯಿಲೆಗಳನ್ನು ತಡೆಯುತ್ತದೆ.

ಕೂದಲಿನ ಕಾಂತಿ

ಮೀನಿನ ತಲೆಯಲ್ಲಿರುವ ಪ್ರೋಟೀನ್ ಮತ್ತು ಉತ್ತಮ ಕೊಬ್ಬುಗಳು ಚರ್ಮವನ್ನು ಮೃದುವಾಗಿರಿಸಲು ಮತ್ತು ಕೂದಲು ಉದುರುವುದನ್ನು ತಡೆದು ಹೊಳಪು ನೀಡಲು ಸಹಕಾರಿ

ಹೃದಯದ ಆರೋಗ್ಯ

ಒಮೆಗಾ-3 ಫ್ಯಾಟಿ ಆಸಿಡ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತದ ಅಪಾಯವನ್ನು ತಗ್ಗಿಸಿ, ರಕ್ತನಾಳಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಮೀನಿನ ತಲೆ ಸಾರು!

ಸಾಂಬಾರ್ ಮಾಡುವ ಮುನ್ನ ಮೀನಿನ ತಲೆಯ ಒಳಗಿರುವ ಕೆಂಪು ಭಾಗ (ಕಿವಿರುಗಳನ್ನು) ತೆಗೆದು, ಉಪ್ಪು ಮತ್ತು ಅರಿಶಿನದಿಂದ ಚೆನ್ನಾಗಿ ತೊಳೆಯಿರಿ. ಮೀನಿನ ತಲೆಯಲ್ಲಿ ಸಣ್ಣ ಮತ್ತು ಹರಿತವಾದ ಮೂಳೆಗಳಿರುತ್ತವೆ. ಇದನ್ನು ತಿನ್ನುವಾಗ ತುಂಬಾ ಜಾಗರೂಕತೆಯಿಂದ ಇರಬೇಕು.