ನಿಮ್ಮ ಕರುಳು ಆರೋಗ್ಯವಾಗಿದ್ದರೆ ದೇಹದಲ್ಲಿ ಶೇ. 70-80 ರಷ್ಟು ರೋಗಗಳು ನಮ್ಮನ್ನು ಮುಟ್ಟುವುದೇ ಇಲ್ಲ. ಆರೋಗ್ಯಕರ ಕರುಳಿನ ಆರೈಕೆಗಾಗಿ ಈ ಸಲಹೆಗಳನ್ನು ಪಾಲಿಸಿ.
ಆಹಾರದಲ್ಲಿ ಫೈಬರ್ ಸೇವಿಸಿ
ಬೇಳೆಕಾಳು, ಚಿಗುರು, ಒಟ್ಸ್, ಗೋಧಿ ರೊಟ್ಟಿ, ಹಸಿರು ತರಕಾರಿ, ಹಣ್ಣುಗಳನ್ನು ಸೇವಿಸಿರಿ. ಇದು ಮಲಬದ್ಧತೆ ತಡೆಯುತ್ತದೆ, ಜೊತೆಗೆ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತದೆ.
ಹುದುಗಿಸಿದ ಆಹಾರಗಳನ್ನು ಸೇವಿಸಿರಿ
ಮೊಸರು, ಮಜ್ಜಿಗೆ, ಇಡ್ಲಿ, ದೋಸೆ ಇವುಗಳ ಸೇವನೆಯು ಕರುಳಿಗೆ ಪ್ರೊಬಯಾಟಿಕ್ ವರ್ಧಕಗಳನ್ನು ನೀಡುತ್ತದೆ.
ಅತಿಯಾದ ಸಕ್ಕರೆ ಪದಾರ್ಥಗಳನ್ನು ನಿಲ್ಲಿಸಿ
ಕೋಲ್ಡ್ ಡ್ರಿಂಕ್ಸ್, ಬಿಸ್ಕತ್, ಕೇಕ್, ವೈಟ್ ಬ್ರೆಡ್ನಂತಹ ಆಹಾರಗಳನ್ನು ಸೇವಿಸಬೇಡಿ. ಇದು ಕೆಟ್ಟ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಬೆಳೆಸುತ್ತವೆ.
ಡಿಹೈಡ್ರೇಟ್ ಆಗಿರಿ
ಪ್ರತಿದಿನ 3-4 ಲೀಟರ್ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ಒಣಗಿದ ಮಲ, ಗ್ಯಾಸ್, ಉಬ್ಬಸ ಸಮಸ್ಯೆಗಳನ್ನು ಶೇ. 50 ರಷ್ಟು ಕಡಿಮೆ ಮಾಡಿ ಕರುಳನ್ನು ಆರೋಗ್ಯವಾಗಿರಿಸುತ್ತದೆ.
ಚೆನ್ನಾಗಿ ನಿದ್ರೆ ಮಾಡಿ
ಪ್ರತಿನಿತ್ಯ 7- 8 ಗಂಟೆ ನಿದ್ರೆಯ ವೇಳಾಪಟ್ಟಿಯನ್ನು ಆಯ್ದುಕೊಳ್ಳಿ. ಇದು ದೈನಂದಿನ ಕಾರ್ಯನಿರ್ವಹಣೆ ಮತ್ತು ನಿಯಮಿತ ಕರುಳಿನ ಚಲನೆಯನ್ನು ಖಚಿತಪಡಿಸುತ್ತದೆ.