ಬೆಳಿಗ್ಗೆ ಎದ್ದು ಓಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ!
ಭಾನುಪ್ರಿಯ ಡಿ.ಕೆ
ಬೆಳಿಗ್ಗೆ ಎದ್ದು ಓಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ!
ಬೆಳಿಗ್ಗೆ ಎದ್ದು ಓಡುವುದು ಉತ್ತಮ ಅಭ್ಯಾಸವಾದರೂ, ತಿಳಿಯದೆ ಮಾಡುವ ಕೆಲವು ತಪ್ಪುಗಳು ದೇಹಕ್ಕೆ ಹಾನಿ ಉಂಟುಮಾಡಬಹುದು. ನೀವು ಗಮನಿಸಬೇಕಾದ ಪ್ರಮುಖ ತಪ್ಪುಗಳು ಇಲ್ಲಿವೆ ನೋಡಿ.
ವಾರ್ಮ್-ಅಪ್ ಮಾಡದಿರುವುದು
ಹಾಸಿಗೆಯಿಂದ ಎದ್ದ ತಕ್ಷಣ ಸ್ನಾಯುಗಳು ಬಿಗಿಯಾಗಿರುತ್ತವೆ. ಹಾಗೇ ನೇರವಾಗಿ ವೇಗವಾಗಿ ಓಡಲು ಶುರುಮಾಡಿದರೆ ಸ್ನಾಯು ಸೆಳೆತ ಅಥವಾ ಗಾಯಗಳು ಸಂಭವಿಸಬಹುದು. ಓಡುವ ಮುನ್ನ 5 ನಿಮಿಷ ಹಗುರವಾದ ಸ್ಟ್ರೆಚಿಂಗ್ ಕಡ್ಡಾಯ.
ನೀರು ಕುಡಿಯದಿರುವುದು
ರಾತ್ರಿ ಪೂರ್ತಿ ಮಲಗಿ ಏಳುವಾಗ ದೇಹದಲ್ಲಿ ನೀರಿನಂಶ ಕಡಿಮೆಯಿರುತ್ತದೆ. ಹಾಗೇ ಖಾಲಿ ಹೊಟ್ಟೆಯಲ್ಲಿ ಓಡಿದರೆ ತಲೆಸುತ್ತು ಅಥವಾ ಆಯಾಸವಾಗಬಹುದು. ಓಡುವ 20 ನಿಮಿಷ ಮುಂಚೆ 1-2 ಲೋಟ ನೀರು ಕುಡಿಯಿರಿ.
ಅತಿಯಾದ ಖಾಲಿ ಹೊಟ್ಟೆ ಅಥವಾ ಹೆವಿ ತಿಂಡಿ
ಪೂರ್ತಿ ಖಾಲಿ ಹೊಟ್ಟೆಯಲ್ಲಿ ಮೈಲಿಗಟ್ಟಲೆ ಓಡುವುದು ಅಥವಾ ಹೊಟ್ಟೆ ತುಂಬಾ ತಿಂಡಿ ತಿಂದು ಓಡುವುದು ಎರಡೂ ತಪ್ಪೇ. ಇದು ಹೊಟ್ಟೆ ನೋವು ಅಥವಾ ವಾಂತಿಗೆ ಕಾರಣವಾಗಬಹುದು. ಓಡುವ ಮುನ್ನ ಒಂದು ಬಾಳೆಹಣ್ಣು ಅಥವಾ 2 ಖರ್ಜೂರ ತಿನ್ನುವುದು ಒಳ್ಳೆಯದು.
ಆರಂಭದಲ್ಲೇ ಅತಿಯಾದ ವೇಗ
ಉತ್ಸಾಹದ ಭರದಲ್ಲಿ ಮೊದಲ ದಿನವೇ ತುಂಬಾ ವೇಗವಾಗಿ ಅಥವಾ ದೀರ್ಘ ದೂರ ಓಡಲು ಪ್ರಯತ್ನಿಸಬೇಡಿ. ಇದು ಮಂಡಿ ಮತ್ತು ಕಾಲುಗಳ ಮೂಳೆ ನೋವಿಗೆ ಕಾರಣವಾಗುತ್ತದೆ. ನಿಧಾನವಾಗಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ.
ತಪ್ಪು ಶೂ ಮತ್ತು ಭಂಗಿ
ಸಾಮಾನ್ಯ ಚಪ್ಪಲಿ ಅಥವಾ ವಾಕಿಂಗ್ ಶೂ ಧರಿಸಿ ಓಡುವುದರಿಂದ ಪಾದಗಳಿಗೆ ತೊಂದರೆಯಾಗುತ್ತದೆ. ಹಾಗೆಯೇ ಓಡುವಾಗ ಬೆನ್ನು ಬಾಗಿಸಬಾರದು; ಗೂನು ಬೆನ್ನಿನಂತೆ ಓಡಿದರೆ ಬೆನ್ನು ಮತ್ತು ಕೀಲು ನೋವು ಕಾಣಿಸಿಕೊಳ್ಳಬಹುದು. ಓಡಲು ಸೂಕ್ತವಾದ ರನ್ನಿಂಗ್ ಶೂಸ್ ಬಳಸಿ, ನೇರವಾಗಿ ದೃಷ್ಟಿ ಇಟ್ಟು ಓಡಿ.