ಮೊಡವೆಗಳಿಗೆ ಕಾರಣವಾಗುತ್ತವೆ ಈ ಆಹಾರಗಳು! Pimples

ಭಾನುಪ್ರಿಯ ಡಿ.ಕೆ

ಮೊಡವೆಗಳಿಗೆ ಕಾರಣವಾಗುತ್ತವೆ ಈ ಆಹಾರಗಳು! Pimples

ಮೊಡವೆಗಳು ಹಾರ್ಮೋನ್ ಬದಲಾವಣೆಗಳು, ತೈಲ ಗ್ರಂಥಿಗಳು ಮತ್ತು ಬ್ಯಾಕ್ಟೀರಿಯಾದಿಂದ ಉಂಟಾಗುತ್ತವೆ ಎಂದು ನಂಬಿರುತ್ತೇವೆ. ಆದರೆ, ನಾವು ತಿನ್ನುವ ಆಹಾರಗಳಿಂದಲೂ ಈ ಸಮಸ್ಯೆ ಉಂಟಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಡೈರಿ ಉತ್ಪನ್ನಗಳು

ಹಸುವಿನ ಹಾಲಿನಲ್ಲಿ ಹಾರ್ಮೋನ್‌ಗಳು ಮತ್ತು IGF-1 ಇರುತ್ತವೆ, ಇದು ತೈಲ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಅನೇಕ ಅಧ್ಯಯನಗಳು ಡೈರಿ ಉತ್ಪನ್ನಗಳ ಅತಿಯಾದ ಸೇವನೆಯು ಮೊಡವೆಗಳನ್ನು ಉಂಟು ಮಾಡುತ್ತದೆ ಎಂದು ತಿಳಿಸಿದೆ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಆಹಾರ

ಅತಿಯಾದ ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ತ್ವರಿತವಾಗಿ ಹೆಚ್ಚಿಸಿ ಇನ್ಸುಲಿನ್ ಸ್ಪೈಕ್ ಉಂಟುಮಾಡುತ್ತವೆ. ಇದರಿಂದ ಮೊಡವೆಗಳು ಹೆಚ್ಚಾಗುತ್ತವೆ.

ಫಾಸ್ಟ್ ಫುಡ್

ರಸ್ತೆ ಬದಿ ಸಿಗುವ ಆಹಾರಗಳು ಮತ್ತು ಅಧಿಕ ಕೊಬ್ಬು ಮತ್ತು ಸಂಸ್ಕರಿಸಿದ ಪದಾರ್ಥಗಳು ಉರಿಯೂತವನ್ನು ಹೆಚ್ಚಿಸುತ್ತವೆ. ಇವು ಮೊಡವೆಗಳ ತೀವ್ರತೆಯನ್ನು ಉಂಟು ಮಾಡುತ್ತದೆ.

ಚಾಕೊಲೇಟ್

ಸಕ್ಕರೆ ಮತ್ತು ಡೈರಿ ಉತ್ಪನ್ನಗಳ ಸಂಯೋಜನೆಯಿಂದ ಚಾಕಲೇಟ್​ಗಳನ್ನು ತಯಾರಿಸುವುದರಿಂದ ಮೊಡವೆಗಳು ಹೆಚ್ಚಾಗುತ್ತವೆ.

ಪ್ರೋಟೀನ್ ಪೌಡರ್

ಜಿಮ್ ಸಪ್ಲಿಮೆಂಟ್‌ಗಳಲ್ಲಿ ಸಾಮಾನ್ಯವಾಗಿರುವ ವ್ಹೇ ಡೈರಿ ಡೆರಿವೇಟಿವ್ ಆಗಿದ್ದು, ಇವು ಹಾರ್ಮೋನ್‌ಗಳನ್ನು ಪ್ರಭಾವಿತಗೊಳಿಸಿ ಮೊಡವೆಗಳನ್ನು ಉಂಟುಮಾಡಬಹುದು.