ನರಮಂಡಲ ಮತ್ತು ಸ್ನಾಯುಗಳ ಬಿಗಿತ
ಒತ್ತಡಕ್ಕೆ ಒಳಗಾದಾಗ ದೇಹದ ಸ್ನಾಯುಗಳು ತಂತಾನೇ ಬಿಗಿಗೊಳ್ಳುತ್ತವೆ. ಇದು ನಿರಂತರವಾಗಿ ಮುಂದುವರಿದಾಗ ತಲೆನೋವು, ಕುತ್ತಿಗೆ ನೋವು, ಹೆಗಲು ಮತ್ತು ಬೆನ್ನು ನೋವಿಗೆ ಕಾರಣವಾಗುತ್ತದೆ. ಜೊತೆಗೆ, ಇದು ಮೆದುಳಿನ ಕಾರ್ಯಕ್ಷಮತೆಯನ್ನು ಕುಗ್ಗಿಸಿ, ಮರೆಗುಳಿತನ ಹಾಗೂ ಏಕಾಗ್ರತೆಯ ಕೊರತೆಯನ್ನು ಉಂಟುಮಾಡುತ್ತದೆ.