ಮಳೆಗಾಲದಲ್ಲಿ ಯಾವ ತರಕಾರಿ, ಹಣ್ಣು ತಿಂದರೆ ಸೋಂಕಿನಿಂದ ರಕ್ಷಿಸಿಕೊಳ್ಳಬಹುದು ಎನ್ನುವುದು ತಜ್ಞರು ಹೇಳುತ್ತಾರೆಯೋ, ಅದರಂತೆ ಶೀತದ ವಾತಾವರಣದಿಂದ ಕೂಡಿರುವ ಈ ಮಾನ್ಸೂನ್ನಲ್ಲಿ ಕೆಲವು ತರಕಾರಿಗಳನ್ನು ತಿನ್ನಲೇಬಾರದು ಎನ್ನಲಾಗಿದೆ.
ಆರೋಗ್ಯ ಕಾಪಾಡಿಕೊಳ್ಳಿ
ಥಂಡಿ ವಾತಾವರಣದಿಂದಾಗಿ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಲು ಸಕಾಲ. ಆ ಕಾರಣದಿಂದಾಗಿ ಕೆಲವೊಂದ ತರಕಾರಿಗಳನ್ನು ತಿನ್ನುವುದು ಕಡಿಮೆ ಮಾಡಬೇಕು ಎನ್ನುತ್ತಾರೆ ವೈದ್ಯರು. ಈ ಕ್ರಮವು ಕಾಡುವ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಎನ್ನಲಾಗಿದೆ.
ಪಾಲಾಕ್ ಮುಟ್ಟಬೇಡಿ
ಪಾಲಾಕ್, ಮೆಂತ್ಯೆ, ಲೆಟಿಸ್ ಸೇರಿಂದತೆ ಸೊಪ್ಪುಗಳು ಮಣ್ಣಿನಲ್ಲಿ ಬೆಳೆಯುವ ಕಾರಣ ತೇವಾಂಶ ಹೆಚ್ಚಾಗಿ ಸೂಕ್ಷ್ಮ ಜೀವಿಗಳು ವೃದ್ಧಿಯಾಗುವಂತೆ ಮಾಡುತ್ತದೆ. ಸರಿಯಾಗಿ ಬೇಯಿಸಿ ತಿಂದರೂ ಸಹ ಮಾನ್ಸೂನ್ನಲ್ಲಿ ಈ ಆಹಾರ ಅವಾಯ್ಡ್ ಮಾಡಿ
ಅಣಬೆ
ಮಶ್ರೂಮ್, ಅಣಬೆ, ನಾಯಿ ಕೊಡೆ ಎಂದು ಕರೆಸಿಕೊಳ್ಳುವ ಇದು, ಅಣಬೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಿನ ತೇವಾಂಶ ಹೊಂದಿರುವ ಕಾರಣ, ಬೇಗ ಹಾಳಾಗುತ್ತದೆ. ಕೊಳೆತ ಅಣಬೆ ಫುಡ್ ಪಾಯಿಸನ್ಗೆ ಕಾರಣವಾಗುವುದರಿಂದ ಮಾನ್ಸೂನ್ ಸಮಯದಲ್ಲಿ ಈ ತರಕಾರಿ ಖರೀದಿ ಮಾಡದೆ ಇರುವುದು ಒಳ್ಳೆಯದು.
ಹೂ ಕೋಸು
ಹೂ ಕೋಸಿನಲ್ಲಿ ಸೂಕ್ಷಾಣು ಜೀವಿಗಳು ಹೆಚ್ಚಾಗಿ ವೃದ್ಧಿಯಾಗುವ ಕಾರಣ ಹೂಕೋಸು ಖರೀದಿ ಮಾಡದೆ ಇರುವುದು ಒಳ್ಳೆಯದು. ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಇರುವ ಕಾರಣ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.
ಬದನೆಕಾಯಿ
ಮಳೆಗಾಲದಲ್ಲಿ ಬದನೆಕಾಯಿಯು ಕೀಟಬಾಧೆಗೆ ಒಳಗಾಗುತ್ತದೆ. ಹೀಗಾಗಿ ರೈತರು ಇದಕ್ಕೆ ಹೆಚ್ಚಾಗಿ ರಾಸಾಯನಿಕ ಸಿಂಪಡಿಸುತ್ತಾರೆ. ಇಷ್ಟಾಗಿಯೂ ಕಣ್ಣಿಗೆ ಕಾಣದ ಸಣ್ಣ ಕೀಟಗಳು ಹೊಟ್ಟೆ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ ಎನ್ನುತ್ತಾರೆ