ವಿಶ್ವದಲ್ಲಿ ಅತ್ಯಂತ ಅಪಾಯಕಾರಿ ನಾಯಿ ತಳಿಗಳನ್ನು ಸಾಮಾನ್ಯವಾಗಿ ಮನುಷ್ಯರ ಮೇಲಿನ ದಾಳಿಗಳ ಸಂಖ್ಯೆ, ಕಚ್ಚುವ ಶಕ್ತಿ, ಆಕ್ರಮಣಕಾರಿ ಸ್ವಭಾವ ಮತ್ತು ಅಂಕಿಅಂಶಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅವುಗಳು ಮಾಹಿತಿ ಇಲ್ಲಿದೆ ನೋಡಿ.
ಪಿಟ್ಬುಲ್
ಪಿಟ್ ಬುಲ್ ನಾಯಿಯನ್ನು ವಿಶ್ವದ ಅತ್ಯಂತ ಅಪಾಯಕಾರಿ ನಾಯಿ ಎಂದು ಪರಿಗಣಿಸಲಾಗಿದೆ. 2005-2019ರ ನಡುವೆ ಅಮೆರಿಕದಲ್ಲಿ ಸುಮಾರು 66% ಮಾರಣಾಂತಿಕ ದಾಳಿಗಳಿಗೆ ಈ ನಾಯಿಗಳು ಕಾರಣವಾಗಿದೆ.
ರಾಟ್‌ವೀಲರ್
ರಾಟ್‌ವೀಲರ್ ಅನ್ನು ವಿಶ್ವದ ಅತ್ಯಂತ ಎರಡನೇ ಧೈರ್ಯಶಾಲಿ ನಾಯಿ ಎಂದು ಪರಿಗಣಿಸಲಾಗಿದೆ. ಇದನ್ನು ಆಫ್ರಿಕಾದಕಲ್ಲಿ ಸ್ನಿಪರ್ ನಾಯಿಯಾಗಿ ಬಳಸಾಗುತ್ತದೆ.
ಜರ್ಮನ್ ಶೆಫರ್ಡ್
ಜರ್ಮನ್ ಶೆಫರ್ಡ್ ನಾಯಿಗಳನ್ನು ಅತ್ಯಂತ ಪ್ರತಿಭಾನ್ವಿತ ನಾಯಿ ತಳಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದನ್ನು ಪೊಲೀಸ್ ಮತ್ತು ಮಿಲಿಟರಿ ತರಬೇತಿಯಲ್ಲಿ ಬಳಸಲಾಗುತ್ತದೆ.
ಡೊಬರ್ ಮ್ಯಾನ್ ಪಿನ್ಷರ್
ಡೊಬರ್ ಮ್ಯಾನ್ ಪಿನ್ಷರ್ ನಾಯಿಗಳನ್ನು ಬಲವಾದ ಮೈಕಟ್ಟಿನಿಂದ ಅತ್ಯಂತ ಅಪಾಯಕಾರಿ ನಾಯಿ ಎಂದು ಪರಿಗಣಿಸಲಾಗಿದೆ.
ಮಾಸ್ಟಿಫ್
ಮಾಸ್ಟಿಫ್ ನಾಯಿಗಳು ಉಗ್ರ ನೋಟವನ್ನು ಹೊಂದಿದ್ದು, ಯುದ್ದಗಳಲ್ಲಿ ಹೆಚ್ಚಾಗಿ ಬಳಸಲ್ಪಡುತ್ತವೆ.
ಬಾಕ್ಸರ್
ಬಾಕ್ಸರ್ ತಳಿಯ ನಾಯಿಗಳು ತುಂಬಾ ಬಲವಾದ ದವಡೆ ಮತ್ತು ಹಲ್ಲುಗಳನ್ನು ಹೊಂದಿರುತ್ತವೆ. ಅವುಗಳನ್ನು ಸಾಕುವುದು ಅಪಾಯಕಾರಿ ಎನ್ನಲಾಗಿದೆ.