ಐಪಿಎಲ್​ ಶುರುವಾದಾಗಿನಿಂದ ಆಡಿದ ನಾಲ್ವರು ಆಟಗಾರರಿವರು

ನಿರುಪಾದಿ ಬ್ಯಾಡಗಿ

ಐಪಿಎಲ್​ ಶುರುವಾದಾಗಿನಿಂದ ಆಡಿದ ನಾಲ್ವರು ಆಟಗಾರರಿವರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 19 ನೇ ಆವೃತ್ತಿಗೆ ಕೇವಲ ಒಂದು ವಾರ ಬಾಕಿಯಿದ್ದು, ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದ ಮೂಲಕ ಆರಂಭವಾಗಲಿದೆ.2008ರಲ್ಲಿ ಪ್ರಾರಂಭವಾದಾಗಿನಿಂದ ಪ್ರತಿ ಸೀಸನ್​ನಲ್ಲಿ ಈ ನಾಲ್ವರು ಆಟಗಾರರು ಆಡಿದ್ದಾರೆ

ವಿರಾಟ್ ಕೊಹ್ಲಿ

ಲೆಜೆಂಡರಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 2008ರಲ್ಲಿ ಐಪಿಎಲ್ ಆರಂಭವಾದಾಗಿಂದ ಪ್ರತಿ ಸೀಸನ್​ನಲ್ಲಿ ಆಟವಾಡಿದ್ದಾರೆ. ಅದು ಒಂದೇ ಆರ್​ಸಿಬಿ ಪ್ರಾಂಚೈಸಿ ತಂಡದಲ್ಲಿ.

ಎಂ ಎಸ್​ ಧೋನಿ

ಪ್ರತಿ ಐಪಿಎಲ್ ಋತುವಿನಲ್ಲಿ ಆಡಿದ ಆಟಗಾರರ ಪಟ್ಟಿಯಲ್ಲಿ ಮತ್ತೊಂದು ಐಕಾನಿಕ್ ಹೆಸರು ಎಂ.ಎಸ್.ಧೋನಿ. 2016 ಮತ್ತು 17ರ ಸೀಸನ್​ನಲ್ಲಿ ಸಿಎಸ್​ಕೆ ತಂಡ ಬ್ಯಾನ್​ ಆಗಿದ್ದರಿಂದ ಬೇರ ತಂಡದಲ್ಲಿ ಆಡಿದ್ದು, ಹೊರತು ಪಡಿಸಿದ್ರೆ, ಈಗಲೂ ಸಿಎಸ್​ಕೆ ತಂಡದಲ್ಲಿದ್ದಾರೆ

ರೋಹಿತ್ ಶರ್ಮಾ

ದಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸಹ ಐಪಿಎಲ್​ ಶುರುವಾದಾಗಿನಿಂದ ಎಲ್ಲಾ ಆವೃತ್ತಿಗಳಲ್ಲಿ ಆಡಿದ ಮತ್ತೊಬ್ಬ ಆಟಗಾರ. ಆರಂಭದಲ್ಲಿ ಡೆಕ್ಕನ್ ಚಾರ್ಜ್​ಸ್​ನಲ್ಲಿದ್ದ ಅವರು ಬಳಿಕ ಮುಂಬೈ ತಂಡದಲ್ಲಿ ಖಾಯಂ ಆಗಿದ್ದಾರೆ

ಮನೀಶ್ ಪಾಂಡೆ

ಐಪಿಎಲ್ ಆರಂಭವಾದಾಗಿನಿಂದ ಆಡುತ್ತಿರುವ ಅಪರೂಪದ ಆಟಗಾರರ ಪಟ್ಟಿಯಲ್ಲಿ ಮನೀಶ್ ಪಾಂಡೆ ನಾಲ್ಕನೇ ಮತ್ತು ಅಂತಿಮ ಆಟಗಾರ. ಒಟ್ಟು 7 ತಂಡಗಳಲ್ಲಿ ಆಡಿದ್ದಾರೆ. ಪ್ರಸ್ತುತ ಕೆಕೆಆರ್ ತಂಡದಲ್ಲಿದ್ದಾರೆ