ಪ್ರತಿದಿನ ಅಕ್ಕಿ ಗಂಜಿ ಕುಡಿಯುವುದರಿಂದ ಇಷ್ಟೆಲ್ಲಾ ಲಾಭ

ನಿರುಪಾದಿ ಬ್ಯಾಡಗಿ

ಪ್ರತಿದಿನ ಅಕ್ಕಿ ಗಂಜಿ ಕುಡಿಯುವುದರಿಂದ ಇಷ್ಟೆಲ್ಲಾ ಲಾಭ

ಗಂಜಿ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದ್ದು, ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

ಜೀರ್ಣಕಾರಿ ಸಮಸ್ಯೆ ನಿವಾರಣೆ

ಗಂಜಿ ಪಿಷ್ಟವನ್ನು ಹೊಂದಿರುವುದರಿಂದ ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಅತಿಸಾರ, ಹೊಟ್ಟೆನೋವಿನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ದೇಹ ಪುನರ್ಜಲೀಕರಣಗೊಳಿಸುತ್ತೆ

ಗಂಜಿಯಲ್ಲಿರುವ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಿ ನಿಮ್ಮ ದೇಹವನ್ನು ಪುನರ್ಜಲೀಕರಣಗೊಳಿಸುತ್ತವೆ. ನಿರ್ಜಲೀಕರಣ ಮತ್ತು ಆಯಾಸವನ್ನು ತಡೆಯುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಳ

ಗಂಜಿಯಲ್ಲಿ ವಿಟಮಿನ್ ಬಿ, ಕಬ್ಬಿಣ, ಸತು ಮತ್ತು ಮೆಗ್ನೀಸಿಯಮ್‌ನಂತಹ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದು, ಪ್ರತಿನಿತ್ಯ ಗಂಜಿ ಸೇವಿಸಿದರೆ ಸೋಂಕು, ರೋಗಗಳಿಂದ ರಕ್ಷಣೆ ಪಡೆಯಬಹುದು

ತೂಕ ಇಳಿಕೆಗೆ ಗಂಜಿ ಸಹಾಯ

ಗಂಜಿಯಲ್ಲಿ ಪೈಬರ್ ಅಂಶವಿದ್ದು, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಹಾಯಕಾರಿ. ಗಂಜಿ ಕುಡಿದರೆ ಬಹಳ ಹೊತ್ತು ಹಸಿವಾಗಲ್ಲ.

ಗಂಜಿ ಟೋನರ್ ಆಗಿ ಬಳಕೆ

ದೋಷರಹಿತ ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಲು ಗಂಜಿಯನ್ನು ಅನೇಕ ದೇಶಗಳಲ್ಲಿ ಸೌಂದರ್ಯ ಆರೈಕೆಯಲ್ಲಿ ಬಳಸಲಾಗುತ್ತದೆ. ಹತ್ತಿ ಉಂಡೆಯಿಂದ ನಿಮ್ಮ ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬಹುದು.