ದೇಹ ತಂಪಾಗಿಡಲು ಈ 5 ಆಹಾರಗಳೇ ಬೆಸ್ಟ್

ಮೋಹನ್​ ಶೆಟ್ಟಿ

ದೇಹ ತಂಪಾಗಿಡಲು ಈ 5 ಆಹಾರಗಳೇ ಬೆಸ್ಟ್

ಈಗ ಬಿರು ಬೇಸಿಗೆಗಾಲ. ಮನೆಯಿಂದ ಹೊರಗೆ ಕಾಲಿಡುವ ಮುನ್ನ ಹತ್ತು ಬಾರಿ ಯೋಚಿಸುವಂತ ಪರಿಸ್ಥಿತಿ. ಅಷ್ಟರ ಮಟ್ಟಿಗೆ ತಾಪಮಾನ ಜೋರಾಗಿದೆ. ಸುಡುವ ಬಿಸಿಲಿನಲ್ಲಿ ರಸ್ತೆಯಲ್ಲಿ ಓಡಾಡುವುದು, ಒಂದು ಸೂರಿನಡಿ ಕೂರುವುದು ಕಷ್ಟಸಾಧ್ಯ ಎನ್ನುವಂತಾಗಿದೆ

ನೆತ್ತಿ ಸುಡುವ ಬಿಸಿಲು

ನೆತ್ತಿ ಸುಡುವ ಬಿಸಿಲಿನಲ್ಲಿ ಫ್ಯಾನ್​, ಎಸಿಗಳು ವಿಪರೀತ ಕೆಲಸ ಮಾಡುತ್ತವೆ. ಜನರು ತಾಜಾ ಹಣ್ಣಿನ, ರೆಡಿಮೇಡ್​ ಸಾಫ್ಟ್​ ಡ್ರಿಂಕ್ಸ್​ ಸೇರಿ ಇನ್ನಿತರ ಪಾನೀಯಗಳನ್ನು ಸೇವಿಸುತ್ತಾರೆ. ಕೆಲವರಂತು ಸೆಕೆ ತಡೆಯಲಾಗದೆ ಕೋಲ್ಡ್​ ನೀರನ್ನು ಹೆಚ್ಚಾಗಿ ಕುಡಿಯುತ್ತಾರೆ

ಈ 5 ಆಹಾರಗಳೇ ಬೆಸ್ಟ್

ಉಷ್ಣಾಂಶತೆಯನ್ನು ಕಡಿಮೆ ಮಾಡಲು ನೈಸರ್ಗಿಕವಾದ ಈ ಐದು ಆಹಾರಗಳನ್ನು ಸೇವಿಸಿದರೆ, ದೇಹ ಕೂಲ್​ ಆಗಿರುವುದಂತು ಖಚಿತ. ಅಷ್ಟಕ್ಕೂ, ಯಾವುದು ಆ 5 ಆಹಾರಗಳು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಮಜ್ಜಿಗೆ

ಜನರ ಕೈಗೆಟುಕುವ ದರದಲ್ಲಿ ಲಭ್ಯವಿರುವ ನೈಸರ್ಗಿಕ ಕೂಲ್ ಡ್ರಿಂಕ್ ಎಂದರೆ ಅದು ಮಜ್ಜಿಗೆ. ಇದು ಬೇಸಿಗೆಯಲ್ಲಿ ಉತ್ತಮ ಹಾಗೂ ಅತ್ಯಂತ ಪರಿಣಾಮಕಾರಿ. ರಿಫ್ರೆಶ್ ಮಾತ್ರವಲ್ಲದೆ ಜೀರ್ಣಕ್ರಿಯೆಗೂ ಒಳ್ಳೆಯದು. ಪ್ರೋಬಯಾಟಿಕ್‌ಗಳಲ್ಲಿ ಹೇರಳವಾಗಿರುವ ಮಜ್ಜಿಗೆ, ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ.

ಸೌತೆಕಾಯಿ

ಜೀರೋ ಫ್ಯಾಟ್​ ಸೌತೆಕಾಯಿ ತೂಕ ಇಳಿಕೆಗೆ ಮಾತ್ರವಲ್ಲ, ಬೇಸಿಗೆಯಲ್ಲಿ ದೇಹಕ್ಕೆ ಬೆಸ್ಟ್​ ಆಹಾರ. ಸಂಪೂರ್ಣ ನೀರಿನ ಅಂಶದಿಂದಲೇ ಕೂಡಿರುವ ಸೌತೆಕಾಯಿ, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇವುಗಳ ನೈಸರ್ಗಿಕ ತಂಪಾಗಿಸುವ ಪರಿಣಾಮವು ದೇಹದ ಉಷ್ಣತೆಯನ್ನು ಹತೋಟಿಗೆ ತರುತ್ತದೆ.

ಕಲ್ಲಂಗಡಿ

20 ರೂ. ಕಲ್ಲಂಗಡಿ ಪೀಸ್ ಆರೋಗ್ಯಕ್ಕೆ ಎಷ್ಟೋ ಪ್ರಯೋಜನಗಳನ್ನು ಒದಗಿಸುತ್ತದೆ. ಹೆಚ್ಚಿನ ನೀರಿನ ಅಂಶವಿರುವುದರಿಂದ, ಕಳೆದುಹೋದ ದ್ರವಗಳನ್ನು ಪುನಃ ಶೇಖರಣೆ ಮಾಡುತ್ತದೆ. ಮತ್ತು ನಿರ್ಜಲೀಕರಣವನ್ನು ದೂರವಿಡಲು ಸಹಕಾರಿ. ನೆತ್ತಿ ಸುಡುವ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಉತ್ತಮ

ಪುದೀನ

ಮಸಾಲೆಗೆ ಅಥವಾ ಕೇವಲ ಅಲಂಕಾರಕ್ಕೆ ಮಾತ್ರವಲ್ಲ ಪುದೀನ. ಇದು ನಮ್ಮ ದೇಹಕ್ಕೆ ಅತ್ಯಂತ ಶಕ್ತಿ ಒದಗಿಸುವ ತಂಪಾಗಿಸುವ ಪದಾರ್ಥ. ರಿಫ್ರೆಶಿಂಗ್​ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿರುವ ಪುದೀನ, ದೇಹವನ್ನು ತಂಪಾಗಿಸುವಲ್ಲಿ ಮುಂಚೂಣಿ.

ಎಳನೀರು

ಸಕ್ಕರೆ ಸೋಡಾ, ಕೆಮಿಕಲ್​ನಿಂದ ಮಾಡಲ್ಪಟ್ಟ ಕೂಲ್​ ಡ್ರಿಂಕ್ಸ್​ ಬಿಟ್ಟು ನೈಸರ್ಗಿಕ ಎಳನೀರನ್ನು ಕುಡಿಯಿರಿ. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್​ನಂತಹ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುವ ಎಳನೀರು, ವಿಪರೀತ ಬೆವರುವ ದೇಹಗಳಿಗೆ ಭಾರೀ ಉತ್ತಮ,(ಏಜೆನ್ಸೀಸ್).