ನಿಮ್ಮ ಹಳದಿ ಹಲ್ಲು ಬೆಳ್ಳಗಾಗಲು ಕಿಚನ್‌ನಲ್ಲೇ ಇದೆ ಮದ್ದು!

ಸವಿನಾ ನಾಯ್ಕ

ನಿಮ್ಮ ಹಳದಿ ಹಲ್ಲು ಬೆಳ್ಳಗಾಗಲು ಕಿಚನ್‌ನಲ್ಲೇ ಇದೆ ಮದ್ದು!

ಹಲ್ಲುಗಳ ಹಳದಿ ಬಣ್ಣವನ್ನು ಹೋಗಲಾಡಿಸಿ, ಮುತ್ತಿನಂತಹ ಬಿಳಿ ಕಾಂತಿಯನ್ನು ಪಡೆಯಲು ಮನೆಯಲ್ಲಿಯೇ ಮಾಡಬಹುದಾದ ಕೆಲವು ಸುಲಭ ಮತ್ತು ಪರಿಣಾಮಕಾರಿ ಮದ್ದುಗಳು ಇಲ್ಲಿವೆ

ಉಪ್ಪು ಮತ್ತು ನಿಂಬೆ ರಸ

ಒಂದು ಚಿಟಿಕೆ ಉಪ್ಪಿಗೆ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಹಲ್ಲುಗಳ ಮೇಲೆ ಮೃದುವಾಗಿ ಉಜ್ಜಿ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಹಲ್ಲಿನ ಮೇಲಿನ ಹಳದಿ ಕೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ವಾರಕ್ಕೆ ಒಂದೇ ಬಾರಿ ಮಾಡಿ, ಇಲ್ಲದಿದ್ದರೆ ಹಲ್ಲಿನ ಎನಾಮೆಲ್ ಮೇಲೆ ಪರಿಣಾಮ ಬೀರಬಹುದು.

ತೆಂಗಿನ ಎಣ್ಣೆ

ಬೆಳಿಗ್ಗೆ ಎದ್ದ ತಕ್ಷಣ ಒಂದು ಚಮಚ ಶುದ್ಧ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು 10-15 ನಿಮಿಷಗಳ ಕಾಲ ಮುಕ್ಕಳಿಸಿ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಲ್ಲದೆ, ಹಲ್ಲುಗಳು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣು ಸಿಪ್ಪೆಯ ಒಳಭಾಗದಿಂದ ಹಲ್ಲುಗಳ ಮೇಲೆ 2-3 ನಿಮಿಷಗಳ ಕಾಲ ಉಜ್ಜಿ, ನಂತರ ಬಾಯಿ ತೊಳೆಯಿರಿ. ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಹಲ್ಲುಗಳನ್ನು ಬಿಳಿಯಾಗಿಸಲು ಸಹಕಾರಿ.

ಹಲ್ಲುಗಳ ಆರೋಗ್ಯಕ್ಕಾಗಿ ಟಿಪ್ಸ್

ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲು ಉಜ್ಜುವುದನ್ನು ಮರೆಯಬೇಡಿ. ಅತಿಯಾದ ಕಾಫಿ, ಟೀ ಅಥವಾ ಧೂಮಪಾನ ಹಲ್ಲುಗಳನ್ನು ಹಳದಿ ಮಾಡುತ್ತವೆ. ಪ್ರತಿಯೊಂದು ಊಟದ ನಂತರ ಬಾಯಿಯನ್ನು ನೀರಿನಿಂದ ಚೆನ್ನಾಗಿ ಮುಕ್ಕಳಿಸಿ.