ಕ್ಲಾಸಿಕ್ ಲುಕ್‌ನಲ್ಲಿ ಕಂಗೊಳಿಸಿದ ಸೌತ್ ಕ್ವೀನ್!

ಭಾನುಪ್ರಿಯ ಡಿ.ಕೆ

ಕ್ಲಾಸಿಕ್ ಲುಕ್‌ನಲ್ಲಿ ಕಂಗೊಳಿಸಿದ ಸೌತ್ ಕ್ವೀನ್!

ನಟಿ ಸಮಂತ ಹಳದಿ ಬಣ್ಣದ ಸಾಂಪ್ರದಾಯಿಕ ಸೀರೆಯಲ್ಲಿ ಅತ್ಯಂತ ಸೊಬಗು ಮತ್ತು ಆತ್ಮವಿಶ್ವಾಸದಿಂದ ಕಾಣಿಸಿಕೊಂಡಿದ್ದು, ಸರಳವಾದ ಆಭರಣಗಳು, ಮೃದುವಾದ ಮೇಕಪ್ ಹಾಗೂ ನೈಸರ್ಗಿಕ ಭಂಗಿ ಅವರ ವ್ಯಕ್ತಿತ್ವದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ವೃತ್ತಿ ಜೀವನ

ಸಮಂತ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ತಮ್ಮ ನೈಸರ್ಗಿಕ ಅಭಿನಯ, ಆಕರ್ಷಕ ವ್ಯಕ್ತಿತ್ವ ಮತ್ತು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

ಸಿನಿಮಾ

ಸಮಂತ ರುತ್ ಪ್ರಭು ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ಯೇ ಮಾಯಾ ಚೆಸಾವೆ, ಈಗ, ಅತ್ತಾರಿಂಟಿಕಿ ದಾರೇದಿ, ಥೇರಿ, ಮಹಾನಟಿ, ಸೂಪರ್ ಡಿಲಕ್ಸ್ ಮತ್ತು ಕುಶಿ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಶಸ್ತಿಗಳು

ಅವರು 4 ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಗಳು, 2 ನಂದಿ ಪ್ರಶಸ್ತಿಗಳು, 6 ಸೈಮಾ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅವರ ಅದ್ಭುತ ಅಭಿನಯಕ್ಕೆ ಅನೇಕ ವಿಮರ್ಶಕರ ಹಾಗೂ ಪ್ರೇಕ್ಷಕರ ಮೆಚ್ಚುಗೆ ದೊರೆತಿದೆ.

ವೈಯಕ್ತಿಕ ಜೀವನ

2017 ರಲ್ಲಿ ತೆಲುಗು ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಅದ್ಧೂರಿಯಾಗಿ ಮದುವೆಯಾಗಿದ್ದ ಸಮಂತಾ ವೈಯಕ್ತಕ ಕಾರಣಗಳಿಂದ ಬೇರ್ಪಟ್ಟರು. ನಂತರ 2025 ರಲ್ಲಿ ನಿರ್ದೇಶಕ ರಾಜ್​ ನಿಧಿಮೋರ್​ ಅವರನ್ನು ಡಿಸೆಂಬರ್​ 1 2025 ರಂದು ವಿವಾಹವಾಗಿದ್ದಾರೆ.