ಜೀವವೈವಿಧ್ಯದ ಮಹಾ ಪತನ: ಸದ್ದಿಲ್ಲದೆ ಮರೆಯಾಗುತ್ತಿರುವ ಕಾಡಿನ ರತ್ನಗಳು!
ಭಾನುಪ್ರಿಯ ಡಿ.ಕೆ
ಜೀವವೈವಿಧ್ಯದ ಮಹಾ ಪತನ: ಸದ್ದಿಲ್ಲದೆ ಮರೆಯಾಗುತ್ತಿರುವ ಕಾಡಿನ ರತ್ನಗಳು!
ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಇಡೀ ಭೂಮಿಯ ಮೇಲೆ ಇರುವ ವಿವಿಧ ರೀತಿಯ ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು, ಕೀಟಗಳು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳ ಒಟ್ಟು ಮೊತ್ತವೇ 'ಜೀವವೈವಿಧ್ಯತೆ'.
ಗ್ರೇಟ್ ಇಂಡಿಯನ್ ಬಸ್ಟರ್ಡ್
ಭಾರತದ ಅತ್ಯಂತ ಭಾರವಾದ ಹಾರುವ ಹಕ್ಕಿ. ಇಂದು ಇಡೀ ದೇಶದಲ್ಲಿ ಕೇವಲ 150ಕ್ಕೂ ಕಡಿಮೆ ಹಕ್ಕಿಗಳು ಉಳಿದಿವೆ. ಹುಲಿಗಳ ಸಂರಕ್ಷಣೆಗೆ ಸಿಗುವಷ್ಟು ಹಣಕಾಸಿನ ನೆರವು ಅಥವಾ ಜಾಗೃತಿ ಇದಕ್ಕೆ ಸಿಗುತ್ತಿಲ್ಲ.
ಭಾರತೀಯ ಪ್ಯಾಂಗೋಲಿನ್
ಇದು ವಿಶ್ವದಲ್ಲೇ ಅತಿ ಹೆಚ್ಚು ಅಕ್ರಮ ಸಾಗಣೆಗೆ ಒಳಗಾಗುವ ಸಸ್ತನಿ. ಇದರ ಚಿಪ್ಪುಗಳಿಗಾಗಿ ನಡೆಯುವ ಬೇಟೆ ತಡೆಯಲು ಇನ್ನೂ ಹೆಚ್ಚಿನ ತಾಂತ್ರಿಕ ಬೆಂಬಲದ ಅಗತ್ಯವಿದೆ.
ಘರಿಯಲ್
ಮೊಸಳೆ ಕುಟುಂಬದ ಈ ವಿಶಿಷ್ಟ ಪ್ರಾಣಿ ಗಂಗಾ ಮತ್ತು ಚಂಬಲ್ ನದಿಗಳಿಗೆ ಸೀಮಿತವಾಗಿದೆ. ನದಿಗಳ ಮಾಲಿನ್ಯ ಮತ್ತು ಅಕ್ರಮ ಮರಳು ಗಣಿಗಾರಿಕೆಯಿಂದ ಇವುಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.
ಹಿಮ ಚಿರತೆ
ಹಿಮಾಲಯದ ದುರ್ಗಮ ಭಾಗಗಳಲ್ಲಿರುವ ಇವುಗಳ ಸಂಖ್ಯೆ ಕ್ಷೀಣಿಸುತ್ತಿದ್ದರೂ, ಇವುಗಳ ವಾಸಸ್ಥಾನದ ಸಂಶೋಧನೆಗೆ ಸಿಗುತ್ತಿರುವ ಅನುದಾನ ಸೀಮಿತವಾಗಿದೆ.
ಕಾಶ್ಮೀರ ಕೆಂಪು ಜಿಂಕೆ
ಇದು ಕೇವಲ ಕಾಶ್ಮೀರದ ದಾಚಿಗ್ಯಾಮ್ ರಾಷ್ಟ್ರೀಯ ಉದ್ಯಾನವನಕ್ಕೆ ಸೀಮಿತವಾಗಿದೆ. ಅತಿಯಾದ ಮೇಯಿಸುವಿಕೆ ಮತ್ತು ಮನುಷ್ಯರ ಹಸ್ತಕ್ಷೇಪದಿಂದಾಗಿ ಇವುಗಳ ಆವಾಸಸ್ಥಾನ ಕುಗ್ಗಿದೆ.