ಚಳಿಗಾಲದಲ್ಲಿ ಸ್ವೆಟರ್ ಧರಿಸಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಆಗುವ ಅಪಾಯಗಳು!
ಭಾನುಪ್ರಿಯ ಡಿ.ಕೆ
ಚಳಿಗಾಲದಲ್ಲಿ ಸ್ವೆಟರ್ ಧರಿಸಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಆಗುವ ಅಪಾಯಗಳು!
ಚಳಿಗಾಲದಲ್ಲಿ ಬೆಚ್ಚಗಿರಲು ಸ್ವೆಟರ್ ಧರಿಸಿ ದೀರ್ಘಕಾಲ ಕುಳಿತುಕೊಳ್ಳುವುದು ಸಾಮಾನ್ಯ, ಆದರೆ ಇದು ದೇಹಕ್ಕೆ ಹಲವು ಅಪಾಯಗಳನ್ನು ಉಂಟುಮಾಡಬಹುದು.
ಸ್ನಾಯುಗಳು ಮತ್ತು ಮೂಳೆಗಳ ದೌರ್ಬಲ್ಯ
ಚಳಿಗಾಲದಲ್ಲಿ ಸ್ವೆಟರ್ ಧರಿಸಿ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಅದರ ಜೊತೆಗೆ ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚುತ್ತದೆ. ವಿಟಮಿನ್ ಡಿ ಕೊರತೆಯೂ ಇದಕ್ಕೆ ಕಾರಣವಾಗುತ್ತದೆ.
ಹೃದಯ ಮತ್ತು ಮಧುಮೇಹ ಅಪಾಯ
ದೀರ್ಘಕಾಲ ಕುಳಿತುಕೊಳ್ಳುವುದರಿಂದ ಇದು ಹೃದ್ರೋಗ, ಹೈ ಬ್ಲಡ್ ಪ್ರೆಷರ್, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಚಳಿಯಲ್ಲಿ ಇದು ಮತ್ತಷ್ಟು ತೀವ್ರಗೊಳ್ಳುತ್ತದೆ.
ತೂಕ ಹೆಚ್ಚಳ ಮತ್ತು ದೇಹದ ಚಯಾಪಚಯ ಸಮಸ್ಯೆ
ಸ್ವೆಟರ್ ಧರಿಸಿ ಕಡಿಮೆ ಚಟುವಟಿಕೆ ಮಾಡುವುರಿಂದ ಇದು ಕ್ಯಾಲೊರಿ ಸುಡದೇ ತೂಕ ಹೆಚ್ಚುತ್ತದೆ, ಇನ್ಸುಲಿನ್ ರೆಸಿಸ್ಟೆನ್ಸ್ ಉಂಟಾಗುತ್ತದೆ.
ಚರ್ಮದ ಸಮಸ್ಯೆಗಳು
ಒಳಗೆ ದಪ್ಪ ಸ್ವೆಟರ್ ಧರಿಸಿ ಕುಳಿತಿರುವುದರಿಂದ ಬೆವರು ಸರಿಯಾಗಿ ಆವಿಯಾಗದೇ ಚರ್ಮಕ್ಕೆ ತುರಿಕೆ, ದದ್ದುಗಳು ಅಥವಾ ಸೋಂಕುಗಳು ಉಂಟಾಗಬಹುದು. ಸಿಂಥೆಟಿಕ್ ವೂಲ್ ಸ್ವೆಟರ್‌ಗಳು ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಕಾಲುಗಳಲ್ಲಿ ರಕ್ತ ಸಂಚಾರ ಸಮಸ್ಯೆ
ತುಂಬಾ ಸಮಯ ಕುಳಿತಿರುವುದರಿಂದ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ವೇರಿಕೋಸ್ ವೇನ್ಸ್ ಉಂಟಾಗಬಹುದು, ಇದು ಗಂಭೀರವಾಗಿ ಆರೋಗ್ಯಕ್ಕೆ ಅಪಾಯಕಾರಿ.