ತಂಪು ನೀಡುವ ಕರಬೂಜ ಹಣ್ಣು ಈ ವ್ಯಕ್ತಿಗಳಿಗೆ ತರಬಹುದು ಆಪತ್ತು!
ಭಾನುಪ್ರಿಯ ಡಿ.ಕೆ
ತಂಪು ನೀಡುವ ಕರಬೂಜ ಹಣ್ಣು ಈ ವ್ಯಕ್ತಿಗಳಿಗೆ ತರಬಹುದು ಆಪತ್ತು!
ಬೇಸಿಗೆಯ ಬಿಸಿಲಿನಲ್ಲಿ ದೇಹವನ್ನು ತಂಪಾಗಿರಿಸಲು ಕರಬೂಜ ಹಣ್ಣು ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ನೀರಿನಂಶ ಹೆಚ್ಚಿದ್ದರೂ ಸಹ, ಈ ಕೆಳಗಿನ ಆರೋಗ್ಯ ಸಮಸ್ಯೆ ಇರುವವರು ಇದನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು.
ಮಧುಮೇಹ ಇರುವವರು
ಕರಬೂಜ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಮತ್ತು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವುದರಿಂದ, ಇದನ್ನು ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ತನೆ ಏರಿಕೆಯಾಗಬಹುದು.
ಜೀರ್ಣಕ್ರಿಯೆ ಸಮಸ್ಯೆ ಇರುವವರು
ಕೆಲವರಿಗೆ ಕರಬೂಜ ಹಣ್ಣು ತಿಂದಾಗ ಗ್ಯಾಸ್ ಅಥವಾ ಹೊಟ್ಟೆ ಉಬ್ಬರಿಸಿದಂತಾಗಬಹುದು. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನವಾಗಿ ಅಜೀರ್ಣ ಉಂಟಾಗುವ ಸಾಧ್ಯತೆ ಇರುತ್ತದೆ.
ಕಿಡ್ನಿ ಸಮಸ್ಯೆ ಇರುವವರು
ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಅಂಶ ಸಮೃದ್ಧವಾಗಿದೆ. ತೀವ್ರವಾದ ಮೂತ್ರಪಿಂಡದ ಕಾಯಿಲೆ ಇರುವವರಿಗೆ ಅಧಿಕ ಪೊಟ್ಯಾಸಿಯಮ್ ದೇಹಕ್ಕೆ ಹಾನಿಕಾರಕವಾಗಬಹುದು, ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಸೇವಿಸುವುದು ಉತ್ತಮ.
ನೆಗಡಿ ಮತ್ತು ಕೆಮ್ಮು ಇರುವವರು
ಕರಬೂಜ ಹಣ್ಣು ದೇಹಕ್ಕೆ ತಂಪು ನೀಡುವ ಗುಣವನ್ನು ಹೊಂದಿದೆ. ಆದ್ದರಿಂದ ಪದೇ ಪದೇ ಸೈನಸ್, ನೆಗಡಿ ಅಥವಾ ಕೆಮ್ಮಿನಿಂದ ಬಳಲುವವರು ಇದನ್ನು ಅತಿಯಾಗಿ ತಿನ್ನುವುದರಿಂದ ಸಮಸ್ಯೆ ಹೆಚ್ಚಾಗಬಹುದು.
ತೂಕ ಇಳಿಸುವ ಪ್ರಯತ್ನದಲ್ಲಿರುವವರು
ಇದರಲ್ಲಿ ಕ್ಯಾಲೊರಿ ಕಡಿಮೆ ಇದ್ದರೂ ಸಹ, ಅತಿಯಾದ ಸೇವನೆಯು ಸಕ್ಕರೆಯ ಅಂಶದಿಂದಾಗಿ ತೂಕದ ಮೇಲೆ ಪರಿಣಾಮ ಬೀರಬಹುದು. ಮಿತವಾಗಿ ಸೇವಿಸುವುದು ಸದಾ ಹಿತ.