ದೇಹಕ್ಕೆ ಪ್ರೋಟೀನ್ ಅತ್ಯಗತ್ಯ​

ರಮೇಶ್​ ಕುಮಾರ್​​ ಬಿ ಎಡಮೋಳೆ

ದೇಹಕ್ಕೆ ಪ್ರೋಟೀನ್ ಅತ್ಯಗತ್ಯ​

ಪ್ರೋಟಿನ್​ಗಳು ದೇಹದ ಜೀವಕೋಶಗಳ ಬೆಳವಣಿಗೆ, ದುರಸ್ತಿ ಮತ್ತು ನಿರ್ವಹಣೆಗೆ ಅತ್ಯಗತ್ಯವಾಗಿವೆ. ಸ್ನಾಯುಗಳು, ಅಂಗಾಂಶಗಳು ಮತ್ತು ಕಿಣ್ವಗಳನ್ನು ನಿರ್ಮಿಸಲು ಮತ್ತು ಹಾರ್ಮೋನುಗಳನ್ನು ಉತ್ಪಾದಿಸಲು ಪ್ರಮುಖ ಪಾತ್ರವಹಿಸುತ್ತವೆ.

ಎಷ್ಟು ಪ್ರೋಟೀನ್​ ಬೇಕು?

ವಯಸ್ಸು, ತೂಕ ಮತ್ತು ಚಟುವಟಿಕೆಯನ್ನು ಅವಲಂಬಿಸಿ ಪ್ರತಿ 1 ಕೆಜಿ ದೇಹ ತೂಕಕ್ಕೆ 0.8 ಗ್ರಾಂ ಪ್ರೋಟೀನ್ ಅಗತ್ಯವಾಗುತ್ತದೆ. ಇದನ್ನು ಮಾಂಸ, ಹಾಲಿನ ಉತ್ಪನ್ನಗಳು, ಕಾಳುಗಳು ಮತ್ತು ಬೀಜಗಳ ಮೂಲಕ ಪೂರೈಸಬಹುದು.

ಮೊಟ್ಟೆಗಳು

ಕಡಿಮೆ ಕೊಬ್ಬಿನಾಂಶ ಹೊಂದಿರುವ ಮೊಟ್ಟೆಯ ಬಿಳಿಭಾಗವು ಪ್ರೋಟೀನ್‌ನಿಂದ ಸಮೃದ್ಧವಾಗಿದೆ. ಹಳದಿ ಭಾಗದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್​ ತುಂಬಿರುತ್ತದೆ.

ಹಾಲಿನ ಉತ್ಪನ್ನಗಳು

ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಪನ್ನೀರ್ ಮತ್ತು ಚೀಸ್ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಾಗಿವೆ. ನಿಯಮಿತವಾಗಿ ಸೇವನೆ ಮಾಡಿರುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್​ ದೊರೆಯುತ್ತದೆ.

ಮಾಂಸ

ಕೋಳಿ ಮಾಂಸ, ಮೀನು, ಮೊಟ್ಟೆ ಮತ್ತು ಕುರಿ ಮಾಂಸದಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಆಗಾಗ ತಿನ್ನುವುದರಿಂದ ಪ್ರೋಟೀನ್​ ಮೂಲ ಪಡೆಯಬಹುದು.

ಒಣ ಹಣ್ಣುಗಳು

ಒಣ ಹಣ್ಣುಗಳು, ಬಾದಾಮಿ, ಕಡಲೆಕಾಯಿ, ಚಿಯಾ, ಅಗಸೆ ಸೇರಿದಂತೆ ಮುಂತಾದ ಬೀಜಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರೋಟೀನ್​ ಪಡೆಯಬಹುದು.

ಕಾಳುಗಳು

ಬೇಳೆ, ಹಲಸಂದೆ, ಹಸಿರು ಬಟಾಣಿ, ಕಿಡ್ನಿ ಬೀನ್ಸ್, ರಾಜ್ಮಾ ಮತ್ತ ಹಸಿಕಡಲೆ ಸೇರಿದಂತೆ ಮುಂತಾದ ಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಅಗತ್ಯವಾದ ಪ್ರೋಟೀನ್​ ಪಡೆದುಕೊಳ್ಳಬಹುದು.

ವೆಜಿಟೇರಿಯನ್​ ಪ್ರೋಟೀನ್​

ಸೋಯಾ ಪನ್ನೀರ್​ ಹಾಗೂ ಸೊಯಾ ಬೀನ್ ಕೂಡ ಪ್ರೋಟೀನ್​ನ ಅತ್ಯುತ್ತಮ ಮೂಲವಾಗಿದೆ. ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಪಡೆಯಬಹುದು.

ಧಾನ್ಯಗಳು

ಕಂದು ಅಕ್ಕಿ, ಓಟ್ಸ್, ಸಂಪೂರ್ಣ ಗೋಧಿ ಬ್ರೆಡ್ ಹಾಗೂ ಕ್ವಿನೋವಾ ಕೂಡ ಪ್ರೋಟೀನ್​ ಉತ್ತಮ ಮೂಲವಾಗಿದೆ. ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು.