ಡ್ರ್ಯಾಗನ್​ ಹಣ್ಣಿನ ಅದ್ಭುತ ಆರೋಗ್ಯ ರಹಸ್ಯಗಳು!

ಭಾನುಪ್ರಿಯ ಡಿ.ಕೆ

ಡ್ರ್ಯಾಗನ್​ ಹಣ್ಣಿನ ಅದ್ಭುತ ಆರೋಗ್ಯ ರಹಸ್ಯಗಳು!

ವಿಲಕ್ಷಣ ನೋಟ ಹಾಗೂ ಅಪಾರ ಪೋಷಕಾಂಶಗಳನ್ನು ಹೊಂದಿರುವ ಡ್ರಾಗನ್ ಹಣ್ಣು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಈ ಹಣ್ಣಿನಲ್ಲಿರುವ ಪ್ರಮುಖ ಆರೋಗ್ಯ ರಹಸ್ಯಗಳು ಇಲ್ಲಿವೆ.

ರೋಗನಿರೋಧಕ ಶಕ್ತಿ ವೃದ್ಧಿ

ಡ್ರಾಗನ್ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ದೇಹದ ಬಿಳಿ ರಕ್ತಕಣಗಳನ್ನು ರಕ್ಷಿಸಿ, ಕಾಲೋಚಿತ ರೋಗಗಳು ಹಾಗೂ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತವೆ.

ಸುಲಭ ಜೀರ್ಣಕ್ರಿಯೆ

ಇದರಲ್ಲಿ ನಾರಿನಂಶ ಹೆಚ್ಚಿದ್ದು, ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ, ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಪೋಷಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ.

ಹೃದಯದ ರಕ್ಷಣೆ

ಈ ಹಣ್ಣಿನ ಸಣ್ಣ ಕಪ್ಪು ಬೀಜಗಳಲ್ಲಿ 'ಒಮೆಗಾ-3' ಮತ್ತು 'ಒಮೆಗಾ-9' ಕೊಬ್ಬಿನಾಮ್ಲಗಳಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಯುತ್ತವೆ.

ಸಕ್ಕರೆ ಮಟ್ಟ ನಿಯಂತ್ರಣ

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಈ ಹಣ್ಣು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್ ಏರದಂತೆ ತಡೆಯುತ್ತದೆ. ಮಧುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳುವವರಿಗೆ ಇದು ಸೂಕ್ತವಾದ ಹಣ್ಣು.

ಕಾಂತಿಯುತ ತ್ವಚೆ

ಇದರಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಚರ್ಮದ ಸುಕ್ಕುಗಳನ್ನು ತಡೆದು, ವಯಸ್ಸಾಗುವಿಕೆಯ ಲಕ್ಷಣಗಳನ್ನು ವಿಳಂಬಗೊಳಿಸುತ್ತವೆ. ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತವೆ.