ಉರ್ಮಿಳಾ ಅವರು ತಮ್ಮ ವೃತ್ತಿಜೀವನವನ್ನು ಬಾಲನಟಿಯಾಗಿ ಆರಂಭಿಸಿದರು. 1983 ರ ಪ್ರಸಿದ್ಧ 'ಮಾಸೂಮ್' ಚಿತ್ರದಲ್ಲಿ ಅವರು ನೀಡಿದ ಅಭಿನಂದನಾರ್ಹ ಅಭಿನಯವು ಎಲ್ಲರ ಗಮನ ಸೆಳೆದಿತ್ತು.
'ರಂಗೀಲಾ' ಜೀವನ ಬದಲಿಸಿದ ಸಿನಿಮಾ!
1995 ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ರಂಗೀಲಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಅವರು ಬಾಲಿವುಡ್‌ನ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು. ಈ ಚಿತ್ರದ ಅವರ ನಟನೆ ಮತ್ತು ನೃತ್ಯವು ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.
ಪ್ರಯೋಗಾತ್ಮಕ ಪಾತ್ರಗಳು
ಕೇವಲ ಗ್ಲಾಮರಸ್ ಪಾತ್ರಗಳಷ್ಟೇ ಅಲ್ಲದೆ, 'ಕೌನ್', 'ಜುದಾಯಿ', ಮತ್ತು ಥ್ರಿಲ್ಲರ್ ಚಿತ್ರವಾದ 'ಪ್ಯಾರ್ ತುನೆ ಕ್ಯಾ ಕಿಯಾ' ದಂತಹ ಸಿನಿಮಾಗಳಲ್ಲಿ ನೆಗೆಟಿವ್ ಮತ್ತು ಮಾನಸಿಕ ವಿಭಿನ್ನತೆ ಇರುವ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅತ್ಯುತ್ತಮ ನಟಿಯಾಗಿ ಗುರುತಿಸಿಕೊಂಡರು.
'ಸತ್ಯ' ನಟಿ
ರಾಮ್ ಗೋಪಾಲ್ ವರ್ಮಾ ಅವರೇ ನಿರ್ದೇಶಿಸಿದ 'ಸತ್ಯ' (1998) ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ಅವರ ಅಭಿನಯವು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತು. ಈ ಚಿತ್ರವು ಭಾರತೀಯ ಚಿತ್ರರಂಗದ ದಿಕ್ಸೂಚಿ ಚಿತ್ರಗಳಲ್ಲಿ ಒಂದಾಗಿದೆ
ರಾಜಕೀಯ ಪ್ರವೇಶ
ನಟನೆಯ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿರುವ ಅವರು, 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳಿಕ 2020 ರಲ್ಲಿ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಪಕ್ಷವನ್ನು ಸೇರ್ಪಡೆಗೊಂಡರು
ವೈಯಕ್ತಿಕ ಜೀವನ
ಉರ್ಮಿಳಾ ಮಾತೋಂಡ್ಕರ್ ಅವರು 2016 ರ ಮಾರ್ಚ್ 3 ರಂದು ಕಾಶ್ಮೀರಿ ಉದ್ಯಮಿ ಮತ್ತು ಮಾಡೆಲ್ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ಸರಳ ಹಾಗೂ ಸಾಂಪ್ರದಾಯಿಕ ವಿಧಿ-ವಿಧಾನಗಳ ಮೂಲಕ ವಿವಾಹವಾದರು.