ತರುಣ್-ಸೋನಲ್ ಹೊಸ ಮನೆ ಗೃಹಪ್ರವೇಶ

ಭೂಮಿಕಾ ವಿ. ನಾಥ್​​​

ತರುಣ್-ಸೋನಲ್ ಹೊಸ ಮನೆ ಗೃಹಪ್ರವೇಶ

ನಟ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಕಳೆದ ವರ್ಷಾಂತ್ಯಕ್ಕೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಇದೀಗ ಹೊಸ ವರ್ಷಕ್ಕೆ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ.

ಅಪಾರ್ಟ್​​ಮೆಂಟ್​​ನಲ್ಲಿ ಮನೆ ಖರೀದಿ

ಅಪಾರ್ಟ್​​ಮೆಂಟ್ ಒಂದರಲ್ಲಿ ಮನೆಯನ್ನು ಖರೀದಿಸಿದೆ ಈ ಜೋಡಿ. ಪೂಜೆ ಮಾಡುವ ಮೂಲಕ ಮನೆಯನ್ನು ಪ್ರವೇಶ ಮಾಡಿದರು.

ತಂದೆಯ ಫೋಟೋ ಹೈಲೈಟ್​​

ತರುಣ್ ತಂದೆ ಸುಧೀರ್. ಅವರ ಫೋಟೋವನ್ನು ಮನೆಯ ಹಾಲ್​​ನಲ್ಲಿ ದೊಡ್ಡದಾಗಿ ಹಾಕಲಾಗಿದೆ.

ಶುಭ ಕೋರಿದ ಶರಣ್​

ಗೆಳೆಯನ ಹೊಸ ಮನೆಯ ಪ್ರವೇಶಕ್ಕೆ ಶರಣ್ ಆಗಮಿಸಿ ಶುಭ ಕೋರಿದ್ದಾರೆ.

ವಿಶಾಲವಾದ ಮನೆ

ಶ್ರುತಿ ಹಾಗೂ ಅವರ ಕುಟುಂಬ ಕೂಡ ಗೃಹಪ್ರವೇಶಕ್ಕೆ ಆಗಮಿಸಿದ್ದರು. ಅಲ್ಲದೇ ವಿಶಾಲವಾದ ಮನೆಯನ್ನೇ ತರುಣ್​ ಖರೀದಿ ಮಾಡಿದ್ದಾರೆ.

ಹಾಲುಕ್ಕಿಸೋ ಸಂಪ್ರದಾಯ

ಮದುವೆ ಬಳಿಕ ಹಿಂದೂ ಧರ್ಮವನ್ನು ಪಾಲಿಸುತ್ತಿರುವ ಸೋನಲ್​ ಅದರಂತೆಯೇ ಹಾಲುಕ್ಕಿಸಿ ಪೂಜಾ ಕೈಂಕರ್ಯಗಳನ್ನ ಕೈಗೊಂಡಿದ್ದಾರೆ.

ಆಪ್ತರ ಆಗಮನ

ಗೃಹಪ್ರವೇಶಕ್ಕೆ ತರುಣ್​-ಸೋನಲ್​​ ಕುಟುಂಬವರ್ಗ ಮತ್ತು ಕೆಲ ಆಪ್ತರು ಮಾತ್ರ ಆಗಮಿಸಿದ್ದಾರೆ.