ಟಾಕ್ಸಿಕ್ ಸುಂದರಿ ತಾರಾ ಸುತಾರಿಯಾ

ಭಾನುಪ್ರಿಯ ಡಿ.ಕೆ

ಟಾಕ್ಸಿಕ್ ಸುಂದರಿ ತಾರಾ ಸುತಾರಿಯಾ

ಟಾಕ್ಸಿಕ್​ ಟ್ರೈಲರ್​ ಲಾಂಚ್​ ಇವೆಂಟ್​ ವೇಳೆ ನಟಿ ತಾರಾ ಸುತಾರಿಯಾ ಧರಿಸಿದ್ದ ಉಡುಗೆ ಎಲ್ಲರ ಗಮನ ಸೆಳೆದಿದೆ. ಸೊಗಸಾದ ಲೆಪರ್ಡ್ ಪ್ರಿಂಟ್‌ನ ಆಫ್-ಶೋಲ್ಡರ್ ಲಾಂಗ್ ಗೌನ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅದ್ಭುತ ಲುಕ್

ಬೆಂಗಳೂರಿನಲ್ಲಿ ನಡೆದ 'ಟಾಕ್ಸಿಕ್' (Toxic) ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ತಾರಾ ಸುತಾರಿಯಾ ಅವರ ಅದ್ಭುತ ಲುಕ್ ಎಲ್ಲರ ಗಮನ ಸೆಳೆಯಿತು.

ರೆಬೆಕ್ಕಾ ಪಾತ್ರದಲ್ಲಿ ತಾರಾ

ಈ ಚಿತ್ರದಲ್ಲಿ 'ರೆಬೆಕ್ಕಾ' ಪಾತ್ರದಲ್ಲಿ ನಟಿಸಿರುವ ತಾರಾ ಸುತಾರಿಯಾ, ಯಶ್, ಕಿಯಾಶಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಹಾಗೂ ರುಕ್ಮಿಣಿ ವಸಂತ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಳೆಯ ಹಾಲಿವುಡ್ ಲುಕ್‌

ಡಿಸೈನರ್ ಅಮೃತ್ ಅರೋರಾ ವಿನ್ಯಾಸಗೊಳಿಸಿದ ಬೋಲ್ಡ್ ಲೆಪರ್ಡ್-ಪ್ರಿಂಟ್ ಗೌನ್ ಧರಿಸಿದ್ದ ತಾರಾ, ಸ್ಟೇಟ್‌ಮೆಂಟ್ ಗೋಲ್ಡ್ ಜ್ಯುವೆಲ್ಲರಿ ಹಾಗೂ ವಲ್ಯೂಮಿನಸ್ ಕರ್ಲ್ಸ್ ಮೂಲಕ ಹಳೆಯ ಹಾಲಿವುಡ್ ಲುಕ್‌ನಲ್ಲಿ ಕಂಗೊಳಿಸಿದರು.

ನನಸಾದ ಕನಸು ಎಂದ ತಾರಾ

'ಟಾಕ್ಸಿಕ್' ಚಿತ್ರದ ಭಾಗವಾಗಿರುವುದಕ್ಕೆ ಭಾವುಕರಾದ ತಾರಾ, ಡಿಸ್ನಿಯ "ಎ ಡ್ರೀಮ್ ಈಸ್ ಎ ವಿಶ್ ಯುವರ್ ಹಾರ್ಟ್ ಮೇಕ್ಸ್" ಸಾಲನ್ನು ಉಲ್ಲೇಖಿಸುತ್ತ ಇದು ತಮಗೆ ನನಸಾದ ಕನಸು ಎಂದು ತಿಳಿಸಿದರು.

ಒಳ್ಳೆಯ ಅನುಭವ

ಈ ಸಿನಿಮಾದಲ್ಲಿ ಇಷ್ಟು ವಿಶೇಷವಾದ ತಂಡದೊಂದಿಗೆ ಕೆಲಸ ಮಾಡಿರುವುದು ತನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ಅನುಭವ ಎಂದು ಅವರು ಅಭಿಪ್ರಾಯಪಟ್ಟರು.

ಆಗಸ್ಟ್​ 26ಕ್ಕೆ ಟಾಕ್ಸಿಕ್​

ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾವು ಇದೇ ತಿಂಗಳ ಆಗಸ್ಟ್ 26ರಂದು ಭರ್ಜರಿಯಾಗಿ ತೆರೆಕಾಣಲಿದೆ.