ಮಿಲ್ಕಿ ಬ್ಯೂಟಿ ನಟಿ ತಮನ್ನಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಫ್ಯಾನ್ಸ್ಗಳಿಗಾಗಿ ಒಂದಿಲ್ಲೊಂದು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಬ್ಲ್ಯಾಕ್ ಡ್ರೆಸ್‌ನಲ್ಲಿ ತಮನ್ನಾ ಮಿಂಚಿದ್ದಾರೆ.
ಬ್ಲ್ಯಾಕ್ ಡ್ರೆಸ್ ಧರಿಸಿ ಪೋಸ್
ಬ್ಲ್ಯಾಕ್ ಆ್ಯಂಡ್ ಬ್ಲ್ಯಾಕ್ ಡ್ರೆಸ್ ಧರಿಸಿ ಪೋಸ್ ನೀಡಿರುವ ಹೊಸ ಫೋಟೋಗಳನ್ನು ತಮನ್ನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
'ಬಬ್ಲಿ ಬೌನ್ಸರ್' ಚಿತ್ರ ತೆರೆಗೆ
ತಮನ್ನಾ ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚಿಗೆ ಅವರ 'ಬಬ್ಲಿ ಬೌನ್ಸರ್' ಚಿತ್ರ ತೆರೆಗೆ ಬಂದಿತ್ತು.
ಟ್ರೆಂಡ್ ಆಗುತ್ತಿದೆ ಡ್ರೆಸ್
ಬ್ಲಾಕ್ ಡ್ರೆಸ್‌ನಲ್ಲಿ ತಮನ್ನಾ ಸೌಂದರ್ಯ ಡಬಲ್ ಆಗಿದೆ. ವಿಶೇಷ ಅಂದರೆ ಈ ಫ್ಯಾಶನ್ ಡ್ರೆಸ್ ಎಲ್ಲಾ ಮಹಿಳೆಯರ ಅಂದ ಹೆಚ್ಚಿಸಲಿದೆ. ಇದೇ ಕಾರಣದಿಂದ ಈ ಡ್ರೆಸ್ ಇದೀಗ ಟ್ರೆಂಡ್ ಆಗುತ್ತಿದೆ.
ವಿಜಯ್ ವರ್ಮಾ ಜತೆ ಬ್ರೇಕ್ ಅಪ್
ತಮನ್ನಾ ವಿಜಯ್ ವರ್ಮಾ ಜತೆ ರಿಲೇಶನ್‌ಶಿಪ್ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಭಾಟಿಯಾ ಸೂಪರ್ ಹಿಟ್ ಚಿತ್ರಗಳ ಮೂಲಕ ಗಮನಸೆಳೆದಿದ್ದಾರೆ. ಸ್ತ್ರೀ 2 ಚಿತ್ರದಲ್ಲಿ ತಮನ್ನ ಭಾಟಿಯಾ ಆಜ್ ಕಿ ರಾತ್ ಹಾಡು ಭಾರಿ ಸೂಪರ್ ಹಿಟ್ ಆಗಿತ್ತು.
ವೆಬ್ ಸೀರಿಸ್‌ಗಳಲ್ಲೂ ನಟನೆ
ತೆಲುಗು, ಹಿಂದಿ ಮಾತ್ರವಲ್ಲ, ವೆಬ್ ಸೀರಿಸ್‌ಗಳಲ್ಲೂ ತಮನ್ನಾ ಭಾರಿ ಗಮನಸೆಳೆದಿದ್ದಾರೆ. ಅಮೆಜಾನ್ ಪ್ರೈಮ್‌ನ ಡಯಾನಾ ಪೆಂಟಿ ಸೀರಿಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮ್ಮನ್ನ ಅಭಿಮಾನಿಗಳ ಮೆಚ್ಚುಗೆ
ತಮನ್ನಾ ಫೋಟೋಗಳು ಇದೀಗ ಭಾರಿ ವೈರಲ್ ಆಗಿದೆ. ಹೊಸ ಡ್ರೆಸ್‌ನಲ್ಲಿ ತಮನ್ನಾ ಕಾಣಿಸಿಕೊಂಡು ಇದೀಗ ಮತ್ತೆ ಭಾರಿ ಸಂಚಲನ ಸೃಷ್ಟಿಸಿದ್ದಾರೆ.