ಬೋಲ್ಡ್​ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ...

ಮಮತಾ

ಬೋಲ್ಡ್​ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ...

ಕರ್ನಾಟಕದ ಹೆಮ್ಮೆಯ ಸಾಬೂನಾದ ಮೈಸೂರು ಸ್ಯಾಂಡಲ್​ ಸೋಪ್​​ನ ರಾಯಭಾರಿಯಾಗಿರುವ ಹಾಲುಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಕಪ್ಪು ಬಣ್ಣದ 'ಕಾರ್ಸೆಟ್ ಬ್ಲೌಸ್' ಮತ್ತು ಲೆದರ್ ಸ್ಕರ್ಟ್ ಧರಿಸಿ ಮುಂಬೈನಲ್ಲಿ ಮಿಂಚಿದ್ದಾರೆ.

ದ ಡೆವಿಲ್ ವೇರ್ಸ್ ಪ್ರಾಡಾ 2'ದಲ್ಲಿ ಮಿಂಚಿಂಗ್

ಮುಂಬೈನಲ್ಲಿ ನಡೆದ 'ದ ಡೆವಿಲ್ ವೇರ್ಸ್ ಪ್ರಾಡಾ 2' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಬಾಲಿವುಡ್​ ತಾರೆಯರು ಭಾಗಿಯಾಗಿದ್ದರು. ಹಿಮಾ ಖುರೇಷಿ, ಕರಣ್​ ಜೋಹರ್​, ದಿಯಾ ಮಿರ್ಜಾ, ಸೋಹಾ ಅಲಿ ಖಾನ್​​​ ಕರಿಷ್ಮಾ ತನ್ನಾ ಭಾಗಿಯಾಗಿದ್ದರು.

ತಮನ್ನಾ ಬಟ್ಟೆ..ಲುಕ್​ಗೆ ಫ್ಯಾನ್ಸ್ ಫಿದಾ

ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಮನ್ನಾ ಅವರು ಕಪ್ಪು ಬಣ್ಣದ 'ಕಾರ್ಸೆಟ್ ಬ್ಲೌಸ್' ಮತ್ತು ಲೆದರ್ ಸ್ಕರ್ಟ್ ಅದಕ್ಕೆ ಒಪ್ಪುವಂತೆ ಬ್ಯಾಲೆನ್ಸಿಯಾಗಾದ 'ಥೈ-ಹೈ ಬೂಟ್ಸ್' ಧರಿಸುವ ಮೂಲಕ ಬೋಲ್ಡ್​ ಆಗಿ ಕಾಣಿಸಿಕೊಂಡರು. ಧಿರಿಸಿಗೆ ತಕ್ಕಂತೆ ಕೇಶ ವಿನ್ಯಾಸ, ಲೈಟ್​ ಮೇಕಪ್​​ ಅವರಿಗೆ ಮತ್ತಷ್ಟು ಮೆರುಗು ಕೊಟ್ಟಿತ್ತು.

ಸಿನಿಮಾಗೂ, ಡ್ರೆಸ್​ಗೂ ಲಿಂಕ್​

'ದ ಡೆವಿಲ್ ವೇರ್ಸ್ ಪ್ರಾಡಾ' ಸಿನಿಮಾದಲ್ಲಿ ಮಿರಾಂಡಾ ಪ್ರೀಸ್ಟ್ಲೀ ಎನ್ನುವ ಒಂದು ಪಾತ್ರವಿದೆ. ಕತೆಯ ನಾಯಕಿಯು ಕಠಿಣ ಮತ್ತು ಅತ್ಯಂತ ಸ್ಟೈಲಿಶ್ ಫ್ಯಾಶನ್ ಎಡಿಟರ್​. ಕಾರ್ಯಕ್ರಮಕ್ಕೆ ತಮನ್ನಾ ಧರಿಸಿ ಬಂದಿದ್ದ ಈ ಫ್ಯಾಶನ್​ ಲುಕ್ ಪಾತ್ರಕ್ಕೆ ಗೌರವ ಕೊಟ್ಟಂತಿತ್ತು

ತಮನ್ನಾ ಸಿನಿ ಪಯಣ

ಒಡಿಲಾ2, ಅರೈನ್​​ಮನೆ, ಲಸ್ಟ್​ ಸ್ಟೋರಿಸ್​​, ಸ್ತ್ರೂ2, ವೇದಾ, ಬಾಹುಬಲಿ 2ಮತ್ತು 1, ಎಫ್​ 2 ಮತ್ತು 3 ಹಾಗೂ ಬದ್ರಿನಾಥ್​​, ವೆಂಗಾಯ್​​, ಎಮದುಕಂಟೆ ಪ್ರೇಮಂಟ, ಬೆಂಗಾಲ್​​ ಟೈಗರ್​, ಪೈಯಾ ಸಿನಿಮಾಗಳು ಅವರ ಕೊಟ್ಟ ಹಿಟ್​​ ಸಿನಿಮಾಗಳಾಗಿವೆ.

ವಿಜಯ್​ ವರ್ಮಾ ಜೊತೆ ಡೇಟಿಂಗ್​

ತಮನ್ನಾ ಭಾಟಿಯಾ ಅವರು ಲಸ್ಟ್​ ಸ್ಟೋರಿಸ್​ ಎನ್ನುವ ವೆಬ್​ಸ್ಟೋರಿಸ್​ನಲ್ಲಿ ನಟಿಸುವಾಗ ನಟ ವಿಜಯ್​ ವರ್ಮಾ ಅವರೊಂದಿಗೆ ಡೇಟಿಂಗ್​ನಲ್ಲಿದ್ದರು. ಇದಕ್ಕೂ ಮುನ್ನ ಅವರ ಹೆಸರು ಭಾರತ ತಂಡದ ಕ್ರಿಕೆಟ್ ಆಟಗಾರ ವಿರಾಟ್​ ಕೊಹ್ಲಿ ಜೊತೆ ಕೇಳಿ ಬಂದಿತ್ತು.