ಹಳದಿ ಸೀರೆಯಲ್ಲಿ ಹಾಲ್ಗೆನ್ನೆ ಸುಂದರಿ!

ವಿನಾಯಕ ನಾಯಕ

ಹಳದಿ ಸೀರೆಯಲ್ಲಿ ಹಾಲ್ಗೆನ್ನೆ ಸುಂದರಿ!

ಹಾಲಿನಂತ ಶುಭ್ರ ಮೈಬಣ್ಣದ ಮೂಲಕವೇ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಎಂದರೆ ಅದು ತಮ್ಮನ್ನಾ ಭಾಟಿಯಾ. ದಕ್ಷಿಣ ಭಾರತದ ಜೊತೆಗೆ ಬಾಲಿವುಡ್​ನಲ್ಲಿ ಕೂಡ ತನ್ನದೇ ಆದ ಸ್ಥಾನವನ್ನು ಪಡೆದಿರುವ ನಟಿ ಇತ್ತೀಚೆಗೆ ಹಳದಿ ಬಣ್ಣದ ಸೀರೆಯನ್ನುಟ್ಟು ಫೋಟೊಶೂಟ್​ ಮಾಡಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಈ ಫೋಟೊಗಳನ್ನು ನಟಿ ಹಂಚಿಕೊಂಡಿದ್ದು, ಅಭಿಮಾನಿಗಳು ಕಮೆಂಟ್​ ಬಾಕ್ಸ್​ ತುಂಬಿಸುವ ಕೆಲಸಕ್ಕೆ ಇಳಿದ್ದಿದ್ದಾರೆ.

ಮುಂಬೈನಲ್ಲಿ ಜನನ

ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ತಮನ್ನಾ ಭಾಟಿಯಾ ಡಿಸೆಂಬರ್​ 21, 1989 ರಂದು ಮುಂಬೈನಲ್ಲಿ ಜನಿಸಿದರು. ಇವರು ಹಿಂದಿ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದಲ್ಲೂ ಅತ್ಯಂತ ದೊಡ್ಡ ಜನಪ್ರಿಯತೆಯನ್ನು ಗಳಿಸಿರುವ ಪ್ರಮುಖ ನಟಿಯಾಗಿದ್ದಾರೆ.

ಮೊದಲ ಸಿನಿಮಾ

ತಮ್ಮ ವೃತ್ತಿಜೀವನವನ್ನು ಹಿಂದಿಯ 'ಚಾಂದ್ ಸಾ ರೋಷನ್ ಚೆಹ್ರಾ' ಚಿತ್ರದ ಮೂಲಕ ಆರಂಭಿಸಿದರು. ತದನಂತರ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟು, ಅನೇಕ ಯಶಸ್ಸುಗಳನ್ನು ಪಡೆಯುವ ಮೂಲಕ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಅವಂತಿಕಾ ತಂದ ಖ್ಯಾತಿ

ಬಾಹುಬಲಿ ಚಿತ್ರದಲ್ಲಿ ತಮನ್ನಾ ನಿರ್ವಹಿಸಿದ ಅವಂತಿಕಾ ಪಾತ್ರವು ವಿಶ್ವದಾದ್ಯಂತ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಈ ಪಾತ್ರದ ಮೂಲಕ ಇವರು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟರು ಮತ್ತು ಭಾರತೀಯ ಚಿತ್ರರಂಗದ ಹೆಮ್ಮೆಯ ನಟಿಯಾಗಿ ಹೊರಹೊಮ್ಮಿದರು.

ಸೋಷಿಯಲ್​ ಮೀಡಿಯಾನಲ್ಲಿ ಸಕ್ರೀಯ

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ತಮನ್ನಾ, ತಮ್ಮ ಹೊಸ ಸಿನಿಮಾಗಳ ಅಪ್‌ಡೇಟ್‌ಗಳು ಮತ್ತು ವಿಭಿನ್ನ ಫೋಟೋಶೂಟ್‌ಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದು, ಫ್ಯಾಷನ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ.

ಮುಂಬರುವ ಸಿನಿಮಾ

ಇತ್ತೀಚಿನ ದಿನಗಳಲ್ಲಿ ಇವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಿರುವ 'ವಾನ್' (Vvan) ಸೇರಿದಂತೆ ಹತ್ತು ಹಲವು ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭರಪೂರ ಮನರಂಜನೆ ನೀಡುತ್ತಿದ್ದಾರೆ.