ಬೇಸಿಗೆಯ ಬಿಸಿಲಿಗೆ ಬ್ರೇಕ್ ಹಾಕಿ! ಈ ಉಡುಪು ಧರಿಸಿದರೆ ಬಾಡಿ ಫುಲ್ ಕೂಲ್...

ಭಾನುಪ್ರಿಯ ಡಿ.ಕೆ

ಬೇಸಿಗೆಯ ಬಿಸಿಲಿಗೆ ಬ್ರೇಕ್ ಹಾಕಿ! ಈ ಉಡುಪು ಧರಿಸಿದರೆ ಬಾಡಿ ಫುಲ್ ಕೂಲ್...

ಬೇಸಿಗೆ ಬಂತು ಅಂದ್ರೆ ಸಾಕು, ಬೆವರು ಮತ್ತು ಉರಿ ಬಿಸಿಲಿನಿಂದ ಪಾರಾಗೋದೇ ದೊಡ್ಡ ಸಾಹಸ. ಆದರೆ ಸರಿಯಾದ ಬಟ್ಟೆ ಆರಿಸಿಕೊಂಡರೆ ಸ್ಟೈಲಿಶ್ ಆಗಿ ಕಾಣೋದು ಮಾತ್ರವಲ್ಲ, ಬಾಡಿಯನ್ನೂ ಕೂಲ್ ಆಗಿ ಇಟ್ಟುಕೊಳ್ಳಬಹುದು.

ಕಾಟನ್ ಉಡುಪುಗಳು

ಬೇಸಿಗೆಗೆ ಹತ್ತಿ ಬಟ್ಟೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇದು ಬೆವರಿನ ಅಂಶವನ್ನು ಹೀರಿಕೊಂಡು ಗಾಳಿಯಾಡುವಂತೆ ಮಾಡುತ್ತದೆ, ಚರ್ಮದ ಕಿರಿಕಿರಿ ತಪ್ಪಿಸುತ್ತದೆ.

ಲಿನೆನ್ ಫ್ಯಾಬ್ರಿಕ್

ಇದು ಹತ್ತಿಗಿಂತಲೂ ಹಗುರವಾದ ಬಟ್ಟೆ. ಪ್ರೀಮಿಯಂ ಲುಕ್ ನೀಡುವ ಜೊತೆಗೆ ಅತಿಯಾದ ಶಾಖದಿಂದ ನಿಮ್ಮ ದೇಹವನ್ನು ರಕ್ಷಿಸುತ್ತದೆ. ಆಫೀಸ್ ಹಾಗೂ ಫಂಕ್ಷನ್‌ಗಳಿಗೆ ಇದು ಬೆಸ್ಟ್ ಆಯ್ಕೆ.

ಖಾದಿ ಬಟ್ಟೆಗಳು

ಖಾದಿ ಬಟ್ಟೆಯ ವಿಶೇಷವೆಂದರೆ ಅದು ಬೇಸಿಗೆಯಲ್ಲಿ ತಂಪು ನೀಡುತ್ತದೆ. ಈಗಿನ ಟ್ರೆಂಡ್‌ನಲ್ಲಿ ಖಾದಿ ಕುರ್ತಾ ಮತ್ತು ಶರ್ಟ್‌ಗಳು ಸಖತ್ ಸ್ಟೈಲಿಶ್ ಆಗಿ ಕಾಣುತ್ತವೆ.

ಸಡಿಲವಾದ ಉಡುಪುಗಳು

ಬಿಸಿಲಿದ್ದಾಗ ಮೈಗೆ ಅಂಟಿಕೊಳ್ಳುವ ಟೈಟ್ ಬಟ್ಟೆ ಬೇಡ. ಪ್ಲಾಜೋ, ಕುರ್ತಾಗಳು ಅಥವಾ ಲೂಸ್ ಟೀ ಶರ್ಟ್‌ಗಳನ್ನು ಬಳಸುವುದು ಉತ್ತಮ.

ತಿಳಿ ಬಣ್ಣದ ಬಟ್ಟೆಗಳು

ಬಿಳಿ, ತಿಳಿ ನೀಲಿ, ಲೈಟ್​ ಗುಲಾಬಿ ಅಥವಾ ತಿಳಿ ಹಳದಿ ಬಣ್ಣದ ಉಡುಪುಗಳನ್ನು ಧರಿಸಿ. ಇವು ಸೂರ್ಯನ ಕಿರಣಗಳನ್ನು ಹೆಚ್ಚು ಹೀರಿಕೊಳ್ಳದೆ ಮೈಯನ್ನು ತಂಪಾಗಿರಿಸುತ್ತವೆ.