ಶೀಘ್ರದಲ್ಲೇ ತಾಪ್ಸಿ ಪನ್ನು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ 'ಗಾಂಧಾರಿ' ಸಿನಿಮಾ ತೆರೆಕಾಣಲು ಸಿದ್ಧವಾಗಿದೆ.
ಕಥೆಯ ಹೂರಣ
ಈ ಸಿನಿಮಾದಲ್ಲಿ ತಾಯಿ ಮತ್ತು ಮಗಳ ನಡುವಿನ ಭಾವನಾತ್ಮಕ ಬಂಧ ಹಾಗೂ ಅಪಹರಣಕ್ಕೊಳಗಾದ ತನ್ನ ಮಗಳನ್ನು ಹುಡುಕಲು ತಾಯಿ ಪಡುವ ಸಾಹಸದ ಕಥೆ ಇದಾಗಿದೆ.
ಪಾತ್ರ ಮತ್ತು ಸವಾಲು
ಚಿತ್ರದಲ್ಲಿ ತಾಪ್ಸಿ ಪನ್ನು 'ಬಾನಿ' ಎಂಬ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ರೈಲಿನಲ್ಲಿ ಮಗಳು ಅಪಹರಣಗೊಳ್ಳುವ ದೃಶ್ಯ ಹಾಗೂ ಅಪಘಾತದಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡರೂ ಮಗಳಿಗಾಗಿ ಹೋರಾಡುವ ಅತ್ಯಂತ ಕಠಿಣ ಹಾಗೂ ತೀವ್ರ ಶ್ರಮದ ಪಾತ್ರ ಇದಾಗಿದೆ.
ನಿರ್ದೇಶನ/ನಿರ್ಮಾಣ
ಈ ಚಿತ್ರಕ್ಕೆ ವಿಭಿನ್ನ ಶೈಲಿಯ ಸಿನಿಮಾಗಳಿಗೆ ಹೆಸರುವಾಸಿಯಾದ ದೇವಶಿಷ್ ಮಖಿಜಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಕನಿಕಾ ಧಿಲ್ಲೋನ್ ಕಥೆ ಬರೆದಿದ್ದು, 'ಕತ್ಹಾ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ತಾರಾಗಣ
ತಾಪ್ಸಿ ಪನ್ನು ಜೊತೆಗೆ ಇಶ್ವಾಕ್ ಸಿಂಗ್, ಜತಿನ್ ಸರ್ಣಾ , ಛಾಯಾ ಕದಮ್, ಸ್ವಸ್ತಿಕಾ ಮುಖರ್ಜಿ ಮತ್ತು ಮಿತಾ ವಶಿಷ್ಠ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ಬಿಡುಗಡೆ ದಿನಾಂಕ ಮತ್ತು ಒಟಿಟಿ
'ಗಾಂಧಾರಿ' ಚಿತ್ರವು ನೇರವಾಗಿ ನೆಟ್‌ಫ್ಲಿಕ್ಸ್ (Netflix) ಒಟಿಟಿ ವೇದಿಕೆಯಲ್ಲಿ ಸೆಪ್ಟೆಂಬರ್ 3, 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಮೂಲ ಕಥೆ ವಿವಾದ
ಚಿತ್ರದ ಬಿಡುಗಡೆಗೂ ಮುನ್ನ, ಈ ಕಥೆಯು ತನ್ನದೇ ಪರಿಕಲ್ಪನೆ ಎಂದು ಐಐಟಿ ಮದ್ರಾಸ್ ಪದವೀಧರ ಮತ್ತು ಜಿಎಸ್‌ಟಿ ಇನ್ಸ್‌ಪೆಕ್ಟರ್ ಕಲ್ಯಾಣ್ ಬಂಡಿ ಎಂಬವರು ಆರೋಪಿಸಿದ್ದು, ನಿರ್ಮಾಪಕರು ಈ ವಾದವನ್ನು ತಳ್ಳಿಹಾಕಿ ಇದು ಸಂಪೂರ್ಣ ಸ್ವಂತ ಕಥೆ ಎಂದು ಸ್ಪಷ್ಟಪಡಿಸಿದ್ದಾರೆ.