ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಕ್ರಿಯ ಆಟಗಾರರು | T20 World Cup

ಮಣಿಕಂಠ ಪಾ ಹಿರೇಮಠ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಕ್ರಿಯ ಆಟಗಾರರು | T20 World Cup

ಟಿ20 ವಿಶ್ವಕಪ್ ಇತಿಹಾಸದಲ್ಲಿ ಬ್ಯಾಟರ್‌ಗಳ ಅಬ್ಬರದ ನಡುವೆಯೂ ಬೌಲರ್‌ಗಳು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್​ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಕ್ರಿಯ ಆಟಗಾರರ ವಿವರ ಇಲ್ಲಿದೆ.

ವನಿಂದು ಹಸರಂಗ (ಶ್ರೀಲಂಕಾ) – 37 ವಿಕೆಟ್

ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಕೇವಲ 19 ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ. ಇವರ ಬೌಲಿಂಗ್ ಸರಾಸರಿ (11.72).

ರಶೀದ್ ಖಾನ್ (ಅಫ್ಘಾನಿಸ್ತಾನ) – 37 ವಿಕೆಟ್

ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ 23 ಪಂದ್ಯಗಳಿಂದ 37 ವಿಕೆಟ್ ಪಡೆದು ಹಸರಂಗ ಜೊತೆ ಸಮಬಲ ಸಾಧಿಸಿದ್ದು, ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ.

ಆಡಮ್ ಜಂಪಾ (ಆಸ್ಟ್ರೇಲಿಯಾ) – 36 ವಿಕೆಟ್

ಆಸ್ಟ್ರೇಲಿಯಾದ ಯಶಸ್ವಿ ಸ್ಪಿನ್ನರ್ ಆಡಮ್ ಜಂಪಾ 21 ಪಂದ್ಯಗಳಲ್ಲಿ 36 ವಿಕೆಟ್ ಕಬಳಿಸಿದ್ದಾರೆ. 2021ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

ಆನ್ರಿಚ್ ನೋಕಿಯಾ (ದಕ್ಷಿಣ ಆಫ್ರಿಕಾ) – 35 ವಿಕೆಟ್

ವೇಗದ ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಆನ್ರಿಚ್ ನೋಕಿಯಾ ಮುಂಚೂಣಿಯಲ್ಲಿದ್ದಾರೆ. ಕೇವಲ 19 ಪಂದ್ಯಗಳಲ್ಲಿ 35 ವಿಕೆಟ್ ಪಡೆದಿದ್ದಾರೆ.