ತಮಿಳು ಚಿತ್ರರಂಗದ ಪವರ್ ಕಪಲ್ ಖ್ಯಾತಿಯ ಸೂರ್ಯ ಹಾಗೂ ಜ್ಯೋತಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟು ಭರ್ತಿ 20 ವರ್ಷವನ್ನು ಪೂರೈಸಿದ ಹಿನ್ನಲೆ ಈಗ ದಿ ಸಿಕ್ವೇಲ್ ಎಂದು ವಿನೂತನವಾಗಿ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಇಪ್ಪತ್ತು ವರ್ಷದ ನಂತರ ಇಬ್ಬರು ಕ್ರಿಶ್ಚಿಯನ್ ಸಂಪ್ರದಾಯದಂತೆ ಇನ್ನೊಮ್ಮೆ ಮದುವೆಯಾಗಿದ್ದಾರೆ.
ಚಿತ್ರರಂಗದ ಆರಂಭಿಕ ಭೇಟಿ
ತಮಿಳಿನ 'ಪೂವೆಲ್ಲಂ ಕೆಟ್ಟುಪ್ಪಾರ್' ಚಿತ್ರದಲ್ಲಿ ಒಟ್ಟಿಗೆ ನಟಿಸುವಾಗ ಸೂರ್ಯ ಮತ್ತು ಜ್ಯೋತಿಕಾ ಅವರ ಮಧ್ಯೆ ಪರಿಚಯ ಉಂಟಾಯಿತು. ಆ ಚಿತ್ರದ ಸೆಟ್‌ನಲ್ಲಿ ಆರಂಭವಾದ ಇವರ ಸ್ನೇಹವು ಕ್ರಮೇಣ ಪ್ರೀತಿಗೆ ತಿರುಗಿ ದಂಪತಿಗಳಾಗಲು ಬಲವಾದ ಅಡಿಪಾಯವಾಯಿತು.
ವಿವಾಹ ಜೀವನ
ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಹಿರಿಯರ ಒಪ್ಪಿಗೆ ಪಡೆದ ಈ ಜೋಡಿ, 2006ನೇ ಇಸವಿ ಸೆಪ್ಟೆಂಬರ್ 11ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಇವರ ಮದುವೆ ಸಮಾರಂಭಕ್ಕೆ ದಕ್ಷಿಣ ಭಾರತದ ಅನೇಕ ದಿಗ್ಗಜ ನಟರು ಹಾಗೂ ಗಣ್ಯರು ಸಾಕ್ಷಿಯಾಗಿದ್ದರು.
ಮಕ್ಕಳ ವಿವರ
ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಹಿರಿಯ ಮಗಳು ದಿಯಾ 2007 ರಲ್ಲಿ ಜನಿಸಿದರೆ, ಕಿರಿಯ ಮಗ ದೇವ್ 2010 ರಲ್ಲಿ ಜನಿಸಿದ್ದರು.
ಜೋಡಿಯ ಯಶಸ್ವಿ ಸಿನಿಮಾಗಳು
'ಕಾಕ್ಕ ಕಾಕ್ಕ', 'ಪೆರ್‌ಝಗು', 'ಸಿಲ್ನು ಒರು ಕಾದಲ್' ಮುಂತಾದ ಹಲವಾರು ಸೂಪರ್‌ಹಿಟ್ ಚಲನಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮನಸೂರೆಗೊಂಡಿದ್ದು, ಇವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಬಹಳ ಜನಪ್ರಿಯವಾಯಿತು.
ನಿರ್ಮಾಣ ಸಂಸ್ಥೆ ಸ್ಥಾಪನೆ
ಸೂರ್ಯ ಮತ್ತು ಜ್ಯೋತಿಕಾ ಒಟ್ಟಾಗಿ '2D ಎಂಟರ್‌ಟೈನ್‌ಮೆಂಟ್' ಎಂಬ ಸ್ವಂತ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ಇದರ ಮೂಲಕ ಸಮಾಜಮುಖಿ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಅನೇಕ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಯಶಸ್ಸು ಕಂಡಿದ್ದಾರೆ.
ಸಾಮಾಜಿಕ ಕಳಕಳಿ
ಚಲನಚಿತ್ರ ನಟನೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಈ ಜೋಡಿ ಮುಂಚೂಣಿಯಲ್ಲಿದೆ. ಸೂರ್ಯರವರ 'ಅಗರಮ್ ಫೌಂಡೇಶನ್' ಮೂಲಕ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದು, ಜೋ ಸಹ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.
ಮುಂಬೈ ವಾಸ
ತಮ್ಮ ಮಕ್ಕಳಾದ ದಿಯಾ ಮತ್ತು ದೇವ್ ಅವರ ಉತ್ತಮ ಶೈಕ್ಷಣಿಕ ಭವಿಷ್ಯ ಹಾಗೂ ವಿದ್ಯಾಭ್ಯಾಸಕ್ಕಾಗಿ ಸೂರ್ಯ ಮತ್ತು ಜ್ಯೋತಿಕಾ ಕುಟುಂಬವು ಸದ್ಯ ಚೆನ್ನೈನಿಂದ ಮುಂಬೈ ನಗರಕ್ಕೆ ತಮ್ಮ ನಿವಾಸವನ್ನು ಬದಲಾಯಿಸಿ ಅಲ್ಲಿ ವಾಸಿಸುತ್ತಿದ್ದಾರೆ.
ಮಾದರಿ ದಂಪತಿ ಸ್ಥಾನ
ಭಾರತೀಯ ಚಿತ್ರರಂಗದಲ್ಲಿ ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನವನ್ನು ಅತ್ಯಂತ ಸಮತೋಲನದಿಂದ ಮುನ್ನಡೆಸುತ್ತಿರುವ ಇವರು, ಯುವ ಪಿಳಿಗೆಗೆ ಎಲ್ಲಾ ವಿಷಯದಲ್ಲೂ ಅತ್ಯಂತ ಮಾದರಿಯಾದ ಮತ್ತು ಅನ್ಯೋನ್ಯವಾದ ಸೆಲೆಬ್ರಿಟಿ ದಂಪತಿ ಎಂದು ಗುರುತಿಸಲ್ಪಟ್ಟಿದ್ದಾರೆ.
ಮತ್ತೊಮ್ಮೆ ಮದುವೆ
ವಿವಾಹವಾಗಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಈ ದಂಪತಿ ಇತ್ತೀಚೆಗೆ ತಮ್ಮ ಕುಟುಂಬ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೊಮ್ಮೆ ಉಂಗುರು ಬದಲಾಯಿಸಿ ವಿವಾಹ ವಚನಗಳನ್ನು ನವೀಕರಿಸಿಕೊಂಡಿದ್ದಾರೆ.