ಬೇಸಿಗೆ ತರಕಾರಿ ಕೃಷಿ: ನಿಮ್ಮ ಬಾಲ್ಕನಿಗೆ ಸೂಕ್ತವಾದ ಗಿಡಗಳು!

ಭಾನುಪ್ರಿಯ ಡಿ.ಕೆ

ಬೇಸಿಗೆ ತರಕಾರಿ ಕೃಷಿ: ನಿಮ್ಮ ಬಾಲ್ಕನಿಗೆ ಸೂಕ್ತವಾದ ಗಿಡಗಳು!

ಬೇಸಿಗೆಯ ತೀವ್ರ ಬಿಸಿಲಿನಲ್ಲಿಯೂ ನಿಮ್ಮ ಮನೆಯ ಬಾಲ್ಕನಿಯಲ್ಲಿ ಸುಲಭವಾಗಿ ಬೆಳೆಯಬಹುದಾದ ಐದು ತರಕಾರಿಗಳು ಇಲ್ಲಿವೆ. ಇವು ನಿಮ್ಮ ಅಡುಗೆಮನೆಗೆ ತಾಜಾ ತರಕಾರಿ ನೀಡುವುದಲ್ಲದೆ, ಬಾಲ್ಕನಿಯನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ.

ಟೊಮೆಟೊ

ಟೊಮೆಟೊ ಗಿಡಗಳಿಗೆ ಸೂರ್ಯನ ಬೆಳಕು ಬಹಳ ಇಷ್ಟ. ಇವುಗಳನ್ನು ಕುಂಡಗಳಲ್ಲಿ ಸುಲಭವಾಗಿ ಬೆಳೆಯಬಹುದು. ಬೇಸಿಗೆಯಲ್ಲಿ ಇವು ವೇಗವಾಗಿ ಬೆಳೆಯುತ್ತವೆ, ಆದರೆ ಗಿಡಕ್ಕೆ ಆಸರೆಯಾಗಿ ಒಂದು ಕೋಲನ್ನು ನೆಡುವುದು ಉತ್ತಮ.

ಬೆಂಡೆಕಾಯಿ

ಬೆಂಡೆಕಾಯಿ ಸಂಪೂರ್ಣವಾಗಿ ಬಿಸಿಲಿನಲ್ಲಿ ಬೆಳೆಯುವ ತರಕಾರಿ. ಇದು ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲದು. ಸಣ್ಣ ಕುಂಡಗಳಲ್ಲೂ ಇವು ಉತ್ತಮ ಇಳುವರಿ ನೀಡುತ್ತವೆ.

ಹಸಿ ಮೆಣಸಿನಕಾಯಿ

ಬಾಲ್ಕನಿ ಗಾರ್ಡನ್‌ನಲ್ಲಿ ಇರಲೇಬೇಕಾದ ಗಿಡವಿದು. ಒಮ್ಮೆ ನೆಟ್ಟರೆ ದೀರ್ಘಕಾಲದವರೆಗೆ ಮೆಣಸಿನಕಾಯಿ ಪಡೆಯಬಹುದು. ಇದಕ್ಕೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ, ಚಿಕ್ಕ ಕುಂಡ ಸಾಕು.

ಸೌತೆಕಾಯಿ

ಬೇಸಿಗೆಯ ಕಾಲಕ್ಕೆ ಸೌತೆಕಾಯಿ ಅತ್ಯುತ್ತಮ. ಇದು ಬಳ್ಳಿ ಜಾತಿಗೆ ಸೇರಿರುವುದರಿಂದ ಬಾಲ್ಕನಿಯ ಗ್ರಿಲ್‌ಗಳಿಗೆ ಅಥವಾ ಸಣ್ಣ ಬಲೆಗೆ ಹಬ್ಬಿಸಬಹುದು. ಇದು ನಿಮ್ಮ ಬಾಲ್ಕನಿಗೆ ಹಸಿರು ಹೊದಿಕೆಯಂತೆ ಕಾಣುತ್ತದೆ ಮತ್ತು ತಂಪು ನೀಡುತ್ತದೆ.

ಪಾಲಕ್

ಇವು ಅಲ್ಪಾವಧಿಯಲ್ಲಿ ಬೆಳೆಯುವ ಸೊಪ್ಪುಗಳು. ಅರೆಬಿಸಿಲು ಇರುವ ಜಾಗದಲ್ಲೂ ಇವು ಚೆನ್ನಾಗಿ ಬೆಳೆಯುತ್ತವೆ. ಅಗಲವಾದ ಮತ್ತು ಆಳವಿಲ್ಲದ ಪಾತ್ರೆಗಳಲ್ಲಿ ಇವುಗಳನ್ನು ಸುಲಭವಾಗಿ ಬೆಳೆಸಬಹುದು.