ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾತ್ ಇತ್ತೀಚೆಗೆ ಕಂದು ಬಣ್ಣದ ಡ್ರೆಸ್ನಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಕ್ಲಿಕಿಸಿಕೊಂಡ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಸೈಫ್ ಪುತ್ರಿ ಸಾರಾ
ಸಾರಾ ಅಲಿ ಖಾನ್ ಅವರು 12 ಅಗಸ್ಟ್ 1995 ರಲ್ಲಿ ಬಾಲಿವುಡ್‌ನ ಪ್ರಸಿದ್ಧ ನಟರಾದ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ದಂಪತಿಯ ಪುತ್ರಿಯಾಗಿ ಮುಂಬೈನಲ್ಲಿ ಜನಿಸಿದರು.
ರಾಜಕೀಯದಲ್ಲಿ ಪದವಿ
ಚಿತ್ರರಂಗಕ್ಕೆ ಬರುವ ಮೊದಲು ಸಾರಾ ಅಲಿ ಖಾನ್ ಅವರು ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಫಿಲ್ಮ್‌ಫೇರ್ ವಿಜೇತೆ
ಸಾರಾ 2018ರಲ್ಲಿ ತೆರೆಕಂಡ 'ಕೇದಾರನಾಥ' ಚಲನಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು ಮತ್ತು ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪ್ರಮುಖ ಸಿನಿಮಾಗಳು
'ಕೇದಾರನಾಥ' ಯಶಸ್ಸಿನ ಬಳಿಕ ಸಾರಾ 'ಸಿಂಬಾ', 'ಅತ್ರಂಗಿ ರೇ' ಹಾಗೂ 'ಝರಾ ಹಟ್ಕೆ ಝರಾ ಬಚ್ಕೆ' ಮುಂತಾದ ಜನಪ್ರಿಯ ಹಾಗೂ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯ
ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ತಮ್ಮ ಪ್ರವಾಸದ ಅನುಭವಗಳು, ಫಿಟ್‌ನೆಸ್ ದಿನಚರಿ ಮತ್ತು ಕಾವ್ಯಾತ್ಮಕ ಶೀರ್ಷಿಕೆಗಳ ಮೂಲಕ ಯುವ ಅಭಿಮಾನಿಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ.