ಸ್ಟನ್ನಿಂಗ್​ ಬ್ಯೂಟಿ ಸನ್ನಿ ಲಿಯೋನ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಸ್ಟನ್ನಿಂಗ್​ ಬ್ಯೂಟಿ ಸನ್ನಿ ಲಿಯೋನ್​

ಮಾಜಿ ನೀಲಿ ತಾರೆ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹಾಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿವೆ.

ಪಂಜಾಬಿ ಬೆಡಗಿ

ಸನ್ನಿ ಲಿಯೋನ್​ ಅವರ ನಿಜವಾದ ಹೆಸರು ಕರನ್‌ಜಿತ್ ಕೌರ್ ವೋಹ್ರಾ. 1981, ಮೇ 13ರಂದು ಕೆನಡಾದ ಒಂಟಾರಿಯೊದ ಸಾರ್ನಿಯಾ ನಗರದಲ್ಲಿ ಸಿಖ್ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಕೆನಡಿಯನ್-ಅಮೆರಿಕನ್ ಪೌರತ್ವ ಹೊಂದಿದ್ದಾರೆ.

ಮಾಡೆಲ್​ ಆಗಿ ಎಂಟ್ರಿ

ಚಿಕ್ಕವಯಸ್ಸಿನಲ್ಲಿ ಪೀಡಿಯಾಟ್ರಿಕ್ ನರ್ಸ್ (ಮಕ್ಕಳ ವೈದ್ಯಕೀಯ ಸಹಾಯಕಿ) ಆಗುವುದಕ್ಕೆ ಓದುತ್ತಿದ್ದರು. ನಂತರ 2001ರಲ್ಲಿ ಪೆಂಟ್‌ಹೌಸ್ ಮ್ಯಾಗಜಿನ್‌ನಲ್ಲಿ ಮಾಡೆಲ್ ಆಗಿ ಪ್ರವೇಶಿಸಿ, ನೀಲಿ ಚಿತ್ರೋದ್ಯಮಕ್ಕೆ ಬಂದರು.

ಬಾಲಿವುಡ್‌ಗೆ ಎಂಟ್ರಿ

2011ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಭಾರತಕ್ಕೆ ಪರಿಚಯವಾದರು. 2012ರಲ್ಲಿ ಜಿಸ್ಮ್ 2 ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ನಟಿಯಾಗಿ ಡೆಬ್ಯೂ ಮಾಡಿದರು.

ಐಟಂ ಸಾಂಗ್​

ಜಿಸ್ಮ್​ 2 ಬಳಿಕ ರಾಗಿಣಿ ಎಂಎಂಎಸ್ 2, ಜಾಕ್ಸನ್‌ ಜಾಕ್ಸನ್ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ ಸೇರಿದಂತೆ ವಿವಿಧ ಸಿನಿ ಉದ್ಯಮದಲ್ಲಿ ಅನೇಕ ಐಟಂ ಸಾಂಗ್‌ಗಳ ಮೂಲಕ ಜನಪ್ರಿಯರಾದರು.

ವೈಯಕ್ತಿಕ ಜೀವನ

2011ರಲ್ಲಿ ಡ್ಯಾನಿಯಲ್ ವೆಬರ್ ಅವರನ್ನು ಮದುವೆಯಾದರು. ದಂಪತಿ 2017ರಲ್ಲಿ ಒಂದು ಮಗುವನ್ನು ದತ್ತು ಪಡೆದರು. ಬಳಿಕ ಸರೋಗಸಿ ಮೂಲಕ ಇನ್ನಿಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ. ಒಟ್ಟು ಮೂವರು ಮಕ್ಕಳ ತಾಯಿಯಾಗಿದ್ದಾರೆ.

ಸಾಮಾಜಿಕ ಕೆಲಸ

ನೀಲಿ ರಂಗದಿಂದ ಮುಖ್ಯ ಚಿತ್ರರಂಗಕ್ಕೆ ಬಂದ ನಂತರ ಪ್ರಾಣಿ ಸಂರಕ್ಷಣೆಗಾಗಿ PETA ಅಭಿಯಾನಗಳಲ್ಲಿ ಭಾಗವಹಿಸುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ಒಂದು ವಸತಿ ಶಾಲೆಯನ್ನು ದತ್ತು ಪಡೆದು ಅಲ್ಲಿನ ಮಕ್ಕಳ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ.

ಹಾಟ್​ ಫೋಟೋಸ್​ ವೈರಲ್​

ಇದೀಗ ಸನ್ನಿ ಲಿಯೋನ್​ ಅವರು ತಿಳಿ ಹಸಿರು ಬಣ್ಣದ ಟಾಪ್​ ಮತ್ತು ಅಚ್ಚ ಹಸಿರು ಬಣ್ಣದ ಜಾಕೆಟ್​ ಹಾಗೂ ಶಾರ್ಟ್​ ಧರಿಸಿ, ಬೀಚ್​ ಮುಂದೆ ನಿಂತು ಕ್ಯಾಮೆರಾಗೆ ಪೋಸ್​ ನೀಡಿದ್ದು, ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕಾಮೆಂಟ್​ಗಳ ಸುರಿಮಳೆ

ಸನ್ನಿ ಲಿಯೋನ್​ ಹಂಚಿಕೊಂಡಿರುವ ಫೋಟೋಗಳು ವೈರಲ್​ ಆಗಿದ್ದು, ಸನ್ನಿಯ ಮೈಮಾಟಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಕಾಮೆಂಟ್​ಗಳ ಸುರಿಮಳೆಯಾಗುತ್ತಿವೆ. 44 ವರ್ಷ ವಯಸ್ಸಾದರೂ ಸನ್ನಿ ಬ್ಯೂಟಿ ಕಡಿಮೆ ಆಗಿಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್​.