ಸ್ಟ್ರಾಬೆರಿ ಹಣ್ಣಿನ ಪ್ರಯೋಜನಗಳೇನು?

ಕಲಾನ್ವಿತ ಜಿ ಜೈನ್

ಸ್ಟ್ರಾಬೆರಿ ಹಣ್ಣಿನ ಪ್ರಯೋಜನಗಳೇನು?

ಸ್ಟ್ರಾಬೆರಿ ಹಣ್ಣು ಎಲ್ಲಾ ಸಮಯದಲ್ಲೂ ಇದು ದೊರಕುವುದಿಲ್ಲಾ. ಆದರೆ ಈ ಹಣ್ಣಿನಿಂದ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಲಾಭಗಳಿವೆ.

ವಿಟಮಿನ್ ಸಿ ಧಾರಾಳ

ಈ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿರುವುದರಿಂದಸ್ಟ್ರಾಬೆರಿ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಹೃದಯ ಆರೋಗ್ಯಕ್ಕೆ ಉತ್ತಮ

ಇದರಿಂದ ಆಂಟಿಆಕ್ಸಿಡೆಂಟ್‌ಗಳು ಉರಿಯೂತವನ್ನು ಕಡಿಮೆ ಮಾಡಿ, ರಕ್ತದೊತ್ತಡ ನಿಯಂತ್ರಣ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ. ಆದ್ದರಿಂದ ಹೃದಯದ ಆರೋಗ್ಯಕ್ಕೂ ಇದು ಉತ್ತಮ.

ತ್ವಚೆಗೆ ಹೊಳಪು ನೀಡುತ್ತದೆ

ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಚಳಿಗಾಲದ ಒಣಗಿಸುವಿಕೆಯಿಂದ ತ್ವಚೆಯನ್ನು ರಕ್ಷಿಸಿ, ಹೊಳಪು ನೀಡುತ್ತವೆ ಮತ್ತು ಸುಕ್ಕುಗಳನ್ನು ತಡೆಯುತ್ತವೆ.

ತೂಕ ಇಳಿಸಲು ಸಹಾಯಕ

ಕಡಿಮೆ ಕ್ಯಾಲರಿ, ಹೆಚ್ಚು ಫೈಬರ್ ಇರುವುದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣವ್ಯವಸ್ಥೆಯನ್ನು ಸುಧಾರಿಸುತ್ತದೆ.

ಮಧುಮೇಹ ನಿಯಂತ್ರಣ

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವುದರಿಂದ ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತದೆ.