ದಾಳಿಂಬೆ

Vijayavan

ದಾಳಿಂಬೆ

ದಾಳಿಂಬೆ ಚರ್ಮವು ಚರ್ಮ ರಕ್ಷಣೆಗೆ ಅದ್ಭುತವಾದಂತಹ ಆಹಾರವಗಿದೆ. ಇದರಲ್ಲಿರುವ ಪಾಲಿಫೆನಾಲ್‌ಗಳು, ಫ್ಲ್ಯಾವೊನಾಯ್ಡ್‌ಗಳು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಆಂಟಿಆಕ್ಸಿಡೆಂಟ್ ಗುಣಗಳು ಚರ್ಮದ ವಯಸ್ಸು ಸೌಂದರ್ಯತೆಯನ್ನು ಕಾಪಾಡುತ್ತವೆ.

ಎಳನೀರು

ತೆಂಗಿನ ನೀರು ನೈಸರ್ಗಿಕವಾಗಿ ಎಲೆಕ್ಟ್ರೋಲೈಟ್‌ಗಳ ಮೂಲವಾಗಿದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್​ಗಳು ದೇಹ ಮತ್ತು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ಒದಗಿಸುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ, ಇದು ನಿರ್ಜಲೀಕರಣವನ್ನು ತಡೆಯುತ್ತದೆ ಮತ್ತು ಚರ್ಮ ಒಣಗುವುದನ್ನು ತಡೆಯುತ್ತದೆ.

ಅಲೋವೆರಾ

ಅಲೊವೆರಾ ಚರ್ಮವನ್ನು ಶಾಂತಗೊಳಿಸುವಂತಹ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಅಸ್ಮನ್ನನ್​ ಎಂಬ ಅಂಶವು ಚರ್ಮದ ರಕ್ಷಣಾತ್ಮಕ ತಡೆಗೋಡೆಯನ್ನು ಬಲಪಡಿಸುತ್ತದೆ. ಇದು ಚರ್ಮದಲ್ಲಿರುವ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪಿಸ್ತಾ

ಪ್ರತಿನಿತ್ಯ ಪಿಸ್ತವನ್ನು ಸೇವಿಸುವುದರಿಂದ ಇದು ಚರ್ಮ ರಕ್ಷಣೆಯನ್ನು ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ E ಇರುವುದರಿಂದ ಫ್ರೀ ರಾಡಿಕಲ್‌ಗಳನ್ನು ನಿಯಂತ್ರಿಸಿ, ಮುಂಚಿತ ವಯಸ್ಸು, ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ UV ಕಿರಣಗಳಿಂದ ರಕ್ಷಣೆ ನೀಡಿ, ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ.