ರಾತ್ರಿ ಈ 5 ಹಣ್ಣುಗಳನ್ನು ತಿಂತಿದ್ರೆ ಬಿಟ್ಟುಬಿಡಿ!

ಮೋಹನ್​ ಶೆಟ್ಟಿ

ರಾತ್ರಿ ಈ 5 ಹಣ್ಣುಗಳನ್ನು ತಿಂತಿದ್ರೆ ಬಿಟ್ಟುಬಿಡಿ!

ರಾತ್ರಿಯಲ್ಲಿ ಒಂದಷ್ಟು ಬಗೆಯ ಹಣ್ಣುಗಳನ್ನು ತಿನ್ನುವುದರಿಂದ ಮಂದಗತಿಯ ಜೀರ್ಣಕ್ರಿಯೆ, ನಿದ್ರೆಯ ಕೊರತೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವಂತಹ ಸಮಸ್ಯೆಗಳು ಉಂಟಾಗಬಹುದು.

ಆರೋಗ್ಯ ವೃದ್ಧಿಗಿಂತ ಪೆಟ್ಟು ಜಾಸ್ತಿ

ಆಯುರ್ವೇದ ಮತ್ತು ಪೌಷ್ಟಿಕಾಂಶ ತಜ್ಞರ ಪ್ರಕಾರ, ಸೂರ್ಯಾಸ್ತದ ನಂತರ ಅಥವಾ ರಾತ್ರಿ ಮಲಗುವ ಮೊದಲು ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಗಿಂತ ಪೆಟ್ಟು ಜಾಸ್ತಿ ಎನ್ನಲಾಗಿದೆ.

1. ಕಲ್ಲಂಗಡಿ

ಶೇ.90ರಷ್ಟು ನೀರಿನಾಂಶವನ್ನು ಹೊಂದಿರುತ್ತದೆ. ಇದು ಹಗಲಿನಲ್ಲಿ ದೇಹವನ್ನು ತಂಪಾಗಿಡುತ್ತದೆ. ಆದರೆ, ಅದೇ ರಾತ್ರಿಯಲ್ಲಿ ತಿಂದರೆ, ಹೆಚ್ಚಿನ ನೀರಿನಾಂಶದಿಂದಾಗಿ, ಆಗಾಗ್ಗೆ ಮೂತ್ರ ವಿಸರ್ಜಿಸಬೇಕಾಗುತ್ತದೆ. ಮತ್ತು ನಿದ್ರೆಗೆ ಭಂಗ ತರುತ್ತದೆ.

2. ಬಾಳೆಹಣ್ಣು

ಶೀತ, ಕೆಮ್ಮು ಅಥವಾ ಆಸ್ತಮಾದಂತಹ ಸಮಸ್ಯೆಗಳಿರುವವರು, ರಾತ್ರಿಯಲ್ಲಿ ಈ ಹಣ್ಣನ್ನು ಸೇವಿಸಬೇಡಿ. ಅಲ್ಲದೆ, ಬಾಳೆಹಣ್ಣು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿವೆ. ಇದು ರಾತ್ರಿಯಲ್ಲಿ ಬೇಗನೆ ಜೀರ್ಣವಾಗಲ್ಲ. ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ.

3. ಸಿಟ್ರಸ್​ ಅಂಶವುಳ್ಳ ಹಣ್ಣುಗಳು

ಈ ಹಣ್ಣುಗಳು ವಿಟಮಿನ್ 'ಸಿ'ಯಲ್ಲಿ ಸಮೃದ್ಧ. ಇವುಗಳ ಆಮ್ಲೀಯ ಗುಣಗಳು ರಾತ್ರಿಯಲ್ಲಿ ಎದೆಯುರಿ ಉಂಟುಮಾಡಬಹುದು. ಮಲಗಿದಾಗ ಈ ಆಮ್ಲವು ಮತ್ತೆ ಹೆಚ್ಚಾಗುತ್ತದೆ. ಹಾಗೂ ಎದೆಯುರಿ ಮತ್ತು ನಿದ್ರೆ ಸಮಸ್ಯೆಗೂ ಕಾರಣವಾಬಹುದು.

4. ಮಾವಿನ ಹಣ್ಣು

ರಾತ್ರಿಯಲ್ಲಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆ. ಇದರ ಪರಿಣಾಮವಾಗಿ, ನಿದ್ರಾಹೀನತೆ ಸಮಸ್ಯೆ ಅನುಭವಿಸುತ್ತೀರಿ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿಯಲ್ಲಿ ಮಾವು ತಪ್ಪಿಸಿದರೆ ಉತ್ತಮ.

5. ಪೇರಳೆ/ ಸೀಬೆ

ಸೀಬೆ ಹಣ್ಣಿನಲ್ಲಿ ನಾರಿನಂಶ ಅಧಿಕ. ಇದು ಮಲಬದ್ಧತೆಗೆ ಉತ್ತಮ. ರಾತ್ರಿ ಹೊತ್ತು ತಿಂದರೆ, ಇದರಲ್ಲಿರುವ ಬೀಜಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಹೊಟ್ಟೆ ನೋವು ಅಥವಾ ಗ್ಯಾಸ್​ ಸಮಸ್ಯೆಗಳಿಗೆ ಕಾರಣವಾಗಬಹುದು.