ಮಾಡ್ರನ್​ ರಾಧೆ ಶ್ರೀಲೀಲಾ

ಮಮತಾ

ಮಾಡ್ರನ್​ ರಾಧೆ ಶ್ರೀಲೀಲಾ

ಟಾಲಿವುಡ್​​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾದಲ್ಲಿ ನಟಿಸುವ ಅವಕಾಶನ್ನು ಶ್ರೀಲೀಲಾ ಅವರು ಗಿಟ್ಟಿಸಿಕೊಂಡರಾದರೂ, ಅದೃಷ್ಟ ಕೈಕೊಟ್ಟಿತ್ತು. ಗುಂಟೂರ್​​ ಖಾರಂ, ಮಾಸ್​ ಜಾತ್ರ, ಉಸ್ತಾದ್​ ಭಗತ್​ ಸಿಂಗ್​​​​, ಭಗವಂತ್​ ಕೇಸರಿ ಸಿನಿಮಾವು ಅವರಿಗೆ ಅಷ್ಟಾಗಿ ಹೆಸರನ್ನು ತಂದುಕೊಟ್ಟಿಲ್ಲ.

ರಾಧೆಯಂತೆ ಕಂಡ ಶ್ರೀ ಲೀಲಾ

ಲೆಹಂಗಾ ಹರಿ ಬಿಟ್ಟ ಕೂದಲು, ಅಲಂಕರಿಸಿದ ಮಡಿಕೆ, ಹಾಗೂ ನವಿಲು ಗರಿ ಹಿಡಿದು ನಗುತ್ತಾ ಶ್ರೀ ಲೀಲಾ ಕೊಟ್ಟಿರುವ ಪೋಸ್ ಪಡ್ಡೆ ಹುಡುಗರ ನಿದ್ದೆಕೆಡುವಂತೆ ಮಾಡಿದೆ. ಕೃಷ್ಣ ವಸ್ತು ಹಿಡಿದಿರುವ ಕಾರಣ ನೆಟ್ಟಿಗರು ಮಾಡ್ರನ್​ ರಾಧೆ ಎಂದು ನಾಮಕರಣಮಾಡಿದ್ದಾರೆ

ಶ್ರೀಲೀಲಾ ಸಿನಿಮಾ

ಕಿಸ್​ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಶ್ರೀ ಲೀಲಾ ಅವರು 'ಬೈ ಟು ಲವ್, ಭರಾಟೆ, ಜೇಮ್ಸ್​ ಸಿನಿಮಾದಲ್ಲಿ ನಟಿಸಿದರು. ಪರ ಭಾಷೆಯಲ್ಲಿ ಅವರಿಗೆ ಅವಕಾಶ ಸಿಗುತ್ತಲೇ ಕನ್ನಡದಲ್ಲಿ ನಟಿಸುವುದನ್ನು ಕ್ರಮೇಣವಾಗಿ ಕಡಿಮೆ ಮಾಡಿದ್ದರು.

ಟಾಲಿವುಡ್​ನಲ್ಲಿ ಶ್ರೀ ಹವಾ

ಪೆಳ್ಳಿ ಸಂದಡಿ, ಧಮಾಕಾ, ಗುಂಟೂರ್​​ ಖಾರಂ, ಮಾಸ್​ ಜಾತ್ರ, ಉಸ್ತಾದ್​ ಭಗತ್​ ಸಿಂಗ್, ಭಗವಂತ್​ ಕೇಸರಿ, ಪರಾಸಕ್ತಿ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಈ ಯಾವೊಂದು ಸಿನಿಮಾವು ಅವರಿಗೆ ಅಷ್ಟಾಗಿ ಲಕ್​ ತಂದುಕೊಟ್ಟಿಲ್ಲ.

ಪುಷ್ಪ2 ಚಿತ್ರದ ಐಟಂ ಸಾಂಗ್​ಗೆ ಸ್ಟೆಪ್ ಹಾಕಿದ ಶ್ರೀ ಲೀಲಾ

‘ಪುಷ್ಪ ೨: ದಿ ರೂಲ್’ ಕಿಸಿಕ್​ ಹಾಡಿಗೆ ಅವರು ಹೆಜ್ಜೆ ಹಾಕಿದ್ದರು. ಈ ಹಾಡು ಕ್ಲಿಕ್​ ಆಗಿ ಸಾಕಷ್ಟು ವ್ಯೂವ್ಸ್ ಗಳಿಸಿತ್ತಾದರೂ ಸಿನಿಮಾದಲ್ಲಿ ಅನಾವಶ್ಯಕವಾಗಿ ತೂರಿಸಲಾಗಿದೆ ಎಂದು ಸಿನಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಡೇಟಿಂಗ್​ ರೂಮರ್ಸ್​

ಯುವ ಕ್ರಿಕೆಟ್​​ ಆಟಗಾರ ತಿಲಕ್​ ವರ್ಮಾ ಅವರೊಂದಿಗೆ ಶ್ರೀ ಲೀಲಾ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ಸ್ ಕೇಳಿಬಂದಿದ್ದವು. ಇದಕ್ಕೆ ಅವರ ತಾಯಿ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ಕೊಟ್ಟಿದ್ದರು.