ನಟಿ ಶ್ರೀಲೀಲಾ ದಕ್ಷಿಣ ಭಾರತದ ಜನಪ್ರಿಯ ಯುವ ನಟಿಯರಲ್ಲಿ ಒಬ್ಬರು. ಅವರು ಬಾಲ್ಯದಿಂದಲೇ ಭರತನಾಟ್ಯ ಕಲಿತಿದ್ದು, ನೃತ್ಯದಲ್ಲಿನ ಪ್ರತಿಭೆಯೇ ಅವರನ್ನು ಚಿತ್ರರಂಗದತ್ತ ಕರೆತಂದಿತು.
ಚಿತ್ರರಂಗಕ್ಕೆ ಪಾದಾರ್ಪಣೆ
2019ರಲ್ಲಿ ಬಿಡುಗಡೆಯಾದ ಕನ್ನಡದ 'ಕಿಸ್' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶ್ರೀಲೀಲಾ, ನಂತರ ಭರಾಟೆ, ಬೈ ಟು ಲವ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದರು.
ಟಾಲಿವುಡ್ನ ಸಿನಿಮಾಗಳು
ತೆಲುಗು ಚಿತ್ರರಂಗದಲ್ಲಿ ಧಮಾಕಾ, ಸ್ಕಂದ, ಭಗವಂತ್ ಕೇಸರಿ, ಗುಂಟೂರು ಕಾರಂ ಮುಂತಾದ ಚಿತ್ರಗಳ ಮೂಲಕ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.
ಎಂಬಿಬಿಎಸ್ ಪದವೀಧರೆ
ಶ್ರೀಲೀಲಾ ವೈದ್ಯಕೀಯ ಶಿಕ್ಷಣದಲ್ಲೂ ಸಾಧನೆ ಮಾಡಿದವರು. ಅವರು ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ವೈದ್ಯೆಯಾಗುವ ಕನಸಿನ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಮಿಂಚಿ, ಶಿಕ್ಷಣ ಮತ್ತು ವೃತ್ತಿಜೀವನ ಎರಡನ್ನೂ ಸಮತೋಲನದಿಂದ ನಿಭಾಯಿಸಿದ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಟ್ರೋಲ್ ಫಿಯರ್ ಇತ್ತಾ?
ಸಿನಿಮಾ ಪಯಣದ ಆರಂಭದಲ್ಲಿ ಸಾಮಾಜಿಕ ಜಾಲತಾಣಗಳ ಟೀಕೆ-ಟ್ರೋಲ್‌ಗಳು ತಮ್ಮ ಮೇಲೆ ಮಾನಸಿಕ ಒತ್ತಡ ತಂದಿದ್ದವು ಎಂದು ಶ್ರೀಲೀಲಾ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ನಟನೆಯನ್ನು ಬಿಟ್ಟು ಮತ್ತೆ ಓದಿಗೆ ಮರಳುವ ಯೋಚನೆಯನ್ನೂ ತಾಯಿಯೊಂದಿಗೆ ಹಂಚಿಕೊಂಡಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.
ಪ್ರಶಸ್ತಿಗಳು
ನಟಿ ಶ್ರೀಲೀಲಾ 'ಪೆಳ್ಳಿ ಸಂದ' ಚಿತ್ರದ ಅಭಿನಯಕ್ಕಾಗಿ ಸೈಮಾ ಅತ್ಯುತ್ತಮ ನೂತನ ನಟಿ (ತೆಲುಗು) ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ಝೀ ತೆಲುಗು ಗೋಲ್ಡನ್ ಅವಾರ್ಡ್ಸ್ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರಶಸ್ತಿ ವೇದಿಕೆಗಳಲ್ಲಿ ವಿಶೇಷ ಗೌರವಗಳಿಗೆ ಪಾತ್ರರಾಗಿ, ಯುವ ನಟಿಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.