ಮನೆಯಲ್ಲಿ ಜೇಡ ಕಾಟವೇ? ಈ ಗಿಡಗಳನ್ನು ಬೆಳೆಸಿ!

ಭಾನುಪ್ರಿಯ ಡಿ.ಕೆ

ಮನೆಯಲ್ಲಿ ಜೇಡ ಕಾಟವೇ? ಈ ಗಿಡಗಳನ್ನು ಬೆಳೆಸಿ!

ಮನೆಯೊಳಗೆ ಜೇಡಗಳು ಪ್ರವೇಶಿಸದಂತೆ ತಡೆಯಲು ರಾಸಾಯನಿಕಯುಕ್ತ ಸ್ಪ್ರೇಗಳ ಬದಲಿಗೆ ನೈಸರ್ಗಿಕ ಸಸ್ಯಗಳನ್ನು ಬಳಸುವುದು ಅತ್ಯಂತ ಸುರಕ್ಷಿತ ಮತ್ತು ಸುಲಭವಾದ ಉಪಾಯ. ಜೇಡಗಳಿಗೆ ಕೆಲವು ಸಸ್ಯಗಳ ತೀಕ್ಷ್ಣವಾದ ಸುವಾಸನೆ ಎಂದರೆ ಆಗಿಬರುವುದಿಲ್ಲ. ಅಂತಹ ಐದು ಪ್ರಮುಖ ಸಸ್ಯಗಳು ಇಲ್ಲಿವೆ.

ಪುದೀನಾ

ಪುದೀನಾದಲ್ಲಿರುವ ತೀಕ್ಷ್ಣವಾದ ಮೆಂಥಾಲ್ ಪರಿಮಳ ಜೇಡಗಳಿಗೆ ಇಷ್ಟವಾಗುವುದಿಲ್ಲ. ಮನೆಯ ಕಿಟಕಿಗಳ ಬಳಿ ಅಥವಾ ಪ್ರವೇಶ ದ್ವಾರದಲ್ಲಿ ಪುದೀನಾ ಗಿಡ ಇಡುವುದರಿಂದ ಜೇಡಗಳು ಒಳಗೆ ಬರುವುದಿಲ್ಲ.

ಲ್ಯಾವೆಂಡರ್

ಇದರ ಹಿತವಾದ ಸುಗಂಧ ನಮಗೆ ಇಷ್ಟವಾದರೆ, ಜೇಡಗಳಿಗೆ ಇದು ವಿಕರ್ಷಕವಾಗಿ ಕೆಲಸ ಮಾಡುತ್ತದೆ. ಇದರ ಕಡು ವಾಸನೆ ಜೇಡಗಳನ್ನು ಮನೆಯಿಂದ ದೂರವಿಡುತ್ತದೆ.

ಲೆಮನ್ ಗ್ರಾಸ್

ಇದರಲ್ಲಿ ಸಿಟ್ರೊನೆಲ್ಲಾ ಎಂಬ ನೈಸರ್ಗಿಕ ತೈಲವಿರುತ್ತದೆ. ಇದರ ನಿಂಬೆಹಣ್ಣಿನಂತಹ ತೀಕ್ಷ್ಣ ಪರಿಮಳವು ಜೇಡಗಳು ಮತ್ತು ಸೊಳ್ಳೆಗಳನ್ನು ಮನೆಯೊಳಗೆ ಸುಳಿಯದಂತೆ ನೋಡಿಕೊಳ್ಳುತ್ತದೆ.

ರೋಸ್ಮರಿ

ರೋಸ್ಮರಿ ಗಿಡದ ಮಸಾಲೆಭರಿತ ಮತ್ತು ವುಡ್ಡಿ (Woody) ಸುಗಂಧ ಜೇಡಗಳನ್ನು ಓಡಿಸಲು ರಾಮಬಾಣ. ಇದನ್ನು ಕುಂಡಗಳಲ್ಲಿ ಸುಲಭವಾಗಿ ಬೆಳೆಸಬಹುದು.

ತುಳಸಿ

ಪ್ರತಿಯೊಬ್ಬರ ಮನೆಯಲ್ಲಿರುವ ತುಳಸಿ ಗಿಡವು ಕೇವಲ ಧಾರ್ಮಿಕ ಮತ್ತು ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ, ಜೇಡಗಳನ್ನು ತಡೆಯಲು ಅತ್ಯುತ್ತಮ ಸಾಂಪ್ರದಾಯಿಕ ಪರಿಹಾರವಾಗಿದೆ. ಇದರ ಆಂಟಿ-ಬ್ಯಾಕ್ಟೀರಿಯಲ್ ಗುಣ ಮತ್ತು ಸುಗಂಧ ಕೀಟಗಳನ್ನು ದೂರವಿಡುತ್ತದೆ.