IPL-2026 ಮಿನಿ ಹರಾಜಿನ ವಿಶೇಷತೆಗಳಿವು

ರಮೇಶ್​ ಕುಮಾರ್​​ ಬಿ ಎಡಮೋಳೆ

IPL-2026 ಮಿನಿ ಹರಾಜಿನ ವಿಶೇಷತೆಗಳಿವು

ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಐಪಿಎಲ್​ ಮಿನಿ ಹರಾಜಿಗೆ ನಿನ್ನೆ (ಡಿ.16) ತೆರೆಬಿದ್ದಿದೆ. ಅಬುಧಾಬಿಯಲ್ಲಿ ನಡೆದ ಹರಾಜಿನ ಕೆಲವು ಪ್ರಮುಖ ವಿಶೇಷತೆಗಳು ಇಂತಿವೆ.

RTM ಇರಲಿಲ್ಲ

ನಿನ್ನೆ ನಡೆದಿದ್ದು ಮಿನಿ ಹರಾಜು ಆಗಿದ್ದರಿಂದ RTM (Right to Match) ಆಯ್ಕೆ ಲಭ್ಯವಿರಲಿಲ್ಲ. ಇದು ಮೆಗಾ ಹರಾಜಿಗೆ ಮಾತ್ರ ಇರುವ ನಿಯಮವಾಗಿದೆ.

18 ಕೋಟಿ ರೂ. ಮಾತ್ರ

ವಿದೇಶಿ ಆಟಗಾರರ ವೇತನವನ್ನು 18 ಕೋಟಿ ರೂ. ಗೆ ಬಿಸಿಸಿಐ ನಿಗದಿ ಮಾಡಿದೆ. ಅಂದರೆ, ಹರಾಜು ಬೆಲೆ ಎಷ್ಟೇ ಇದ್ದರೂ ಆಟಗಾರನಿಗೆ ಸಿಗುವುದು ಗರಿಷ್ಠ 18 ಕೋಟಿ ರೂ. ಮಾತ್ರ.

ಕ್ಯಾಮರೂನ್​ ಗ್ರೀನ್​ ದಾಖಲೆ

ಆಸ್ಟ್ರೇಲಿಯಾದ ಆಲ್​ರೌಂಡರ್​ ಆಟಗಾರ ಕ್ಯಾಮರೂನ್ ಗ್ರೀನ್ ಅತ್ಯಂತ ದುಬಾರಿ ವಿದೇಶಿ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಗ್ರೀನ್​ ಅವರು 25.20 ಕೋಟಿಗೆ ಕೋಲ್ಕತ ನೈಟ್​ ರೈಡರ್ಸ್​ ತಂಡವನ್ನು ಸೇರಿದರು.

ಅನ್‌ಕ್ಯಾಪ್ಡ್ ಆಟಗಾರರ ಉದಯ

ಅನ್‌ಕ್ಯಾಪ್ಡ್ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮ ಅವರನ್ನು ತಲಾ 14.20 ಕೋಟಿಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಖರೀದಿ ಮಾಡಿದೆ. ಅನ್‌ಕ್ಯಾಪ್ಡ್ ಆಟಗಾರರ ವಿಚಾರದಲ್ಲಿ ಇದು ದಾಖಲೆಯಾಗಿದೆ.

ಒಟ್ಟು 77 ಸ್ಲಾಟ್‌ಗಳು ಭರ್ತಿ

ಮಿನಿ ಹರಾಜಿಗೆ ಬಿಸಿಸಿಐ ಪಟ್ಟಿ ಮಾಡಿದ 369 ಆಟಗಾರರ ಪೈಕಿ 77 ಮಾರಾಟವಾಗಿದ್ದಾರೆ. ಇದಕ್ಕಾಗಿ ಒಟ್ಟು 215.45 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

ಅಬುಧಾಬಿಯಲ್ಲಿ 3ನೇ ಹರಾಜು

2024ರಲ್ಲಿ ದುಬೈ ಹಾಗೂ 2025ರಲ್ಲಿ ಜಿದ್ದಾ ನಂತರ ಅಬುಧಾಬಿಯಲ್ಲಿ ಸತತ ಮೂರನೇ ಬಾರಿಗೆ ಐಪಿಎಲ್​ ಮಿನಿ ಹರಾಜು ನಡೆದಿದೆ.

KKR ಅತಿ ದೊಡ್ಡ ಖರೀದಿದಾರ

ಆಸ್ಟ್ರೇಲಿಯಾದ ಕ್ಯಾಮರೂನ್​ ಗ್ರೀನ್ (25.20 ಕೋಟಿ ರೂ.) ಮತ್ತು ಶ್ರೀಲಂಕಾದ ಮತೀಶ ಪತಿರಾಣ (18 ಕೋಟಿ ರೂ.) ಗೆ ಭಾರಿ ಮೊತ್ತ ನೀಡುವ ಮೂಲಕ ಕೋಲ್ಕತ ನೈಟ್​ ರೈಡರ್ಸ್​ ಅತಿ ದೊಡ್ಡ ಖರೀದಿದಾರ ಎನಿಸಿಕೊಂಡಿತು.

ಯುವ ಆಟಗಾರರಿಗೆ ಸಿಎಸ್​ಕೆ ಒತ್ತು

ಈ ಬಾರಿಯ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಯುವ ಮತ್ತು ಅನ್‌ಕ್ಯಾಪ್ಡ್ ಆಟಗಾರರ ಮೇಲೆ ಹೆಚ್ಚು ಒತ್ತು ನೀಡಿ, ಹೆಚ್ಚು ಹೂಡಿಕೆ ಮಾಡಿದೆ.

ಸ್ಟಾರ್ ಆಟಗಾರರು ಅನ್‌ಸೋಲ್ಡ್

ಈ ಬಾರಿಯ ಮಿನಿ ಹರಾಜಿನಲ್ಲಿ ಡೆವೊನ್​ ಕಾನ್ವೆ, ಜೇಕ್​ ಫ್ರೇಸರ್​ ಮೆಕ್​ಗುರ್ಕ್​, ಮಹೀಶ್​ ತೀಕ್ಷಣ್​, ಸ್ಟೀವನ್​ ಸ್ಮಿತ್​, ಮುಜೀಬ್​ ರೆಹಮಾನ್​, ಡೆರಿಲ್​ ಮಿಚೆಲ್​, ಉಮೇಶ್​ ಯಾದವ್​ ಹಾಗೂ ಜಾನಿ ಬೈರ್​ಸ್ಟೋರಂತಹ ಸ್ಟಾರ್​ ಆಟಗಾರರು ಅನ್‌ಸೋಲ್ಡ್ ಆದರು.

ತಂಡಗಳ ಸಮತೋಲನಕ್ಕೆ ಒತ್ತು

ಎಲ್ಲ 10 ತಂಡಗಳು ತಮ್ಮ ಖಾಲಿ ಸ್ಥಾನಗಳನ್ನು ಭರ್ತಿ ಮಾಡಿ 25 ಆಟಗಾರರ ಸಂಪೂರ್ಣ ತಂಡವನ್ನು ರಚಿಸಿವೆ. IPL 2026ರ 19ನೇ ಆವೃತ್ತಿ ಮಾರ್ಚ್‌ನಲ್ಲಿ ಆರಂಭವಾಗಲಿದೆ.