ಕೇರಳದ ಸಾಂಪ್ರದಾಯಿಕ ಸೀರೆ ಸದಾ ಒಂದು ವಿಶೇಷವಾದ ಅಂದವಿರುತ್ತದೆ. ಈ ಓಣಂ ಹಬ್ಬಕ್ಕೆ ನಟಿ ಭಾವನಾ ಧರಿಸಿರುವ ಸೀರೆ ಅತ್ಯಂತ ಆಕರ್ಷಕವಾಗಿ ಕಂಡಿದೆ. ಸಾಂಪ್ರದಾಯಿಕ ಹಾಗೂ ಮಾಡರ್ನ್ ಲುಕ್ ಎರಡರ ಮಿಶ್ರಣದಂತಿದೆ. ಅವರ ಈ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸದಾ ನಿನ್ನ ಕಣ್ಣಲ್ಲಿ...
ಕೇರಳದ ತ್ರಿಶೂರ್ನಲ್ಲಿ ಜನಿಸಿದ ಭಾವನಾ ಅವರು ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿದ್ದಾರೆ. ಬಚ್ಚನ್, ವಿಷ್ಣುವರ್ಧನ, 99 ಹಾಗೂ ಜಾಕಿ ಸಿನಿಮಾದಲ್ಲಿ ಮಿಂಚಿದ್ದಾರೆ
'ಚಾರುಲತಾ' ಪಿಲ್ಲುಮಣಿ
ಚಾರುಲತಾ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟ ಪ್ರಿಯಾಮಣಿ ಅವರು, ಅಣ್ಣಾ ಬಾಂಡ್, ರಾಮ್, ವಿಷ್ಣುವರ್ಧನ, ಏನೋ ಒಂಥರಾ ಸಿನಿಮಾದಲ್ಲಿ ಮಿಂಚಿದ್ದರು. ಮುಸ್ತಫಾ ರಾಜ್ ಎಂಬುವವರ ಜೊತೆಗೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಬಹುಭಾಷಾ ನಟಿ ಪ್ರಿಯಾಮಣಿ
ತಿರಕ್ಕಥಾ, ದನಕಾಯೋನು, ಡಾ.56 ಸಿನಿಮಾ ಸೇರಿದಂತೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾದಲ್ಲಿಯೂ ಮಿಂಚಿದ್ದಾರೆ. ರಿಯಾಲಿಟಿ ಶೋಗಳಲ್ಲಿಯೂ ತೀರ್ಪುರಾರರಾಗಿ ಭಾಗವಹಿಸಿದ್ದಾರೆ.
ಸುಂದರಿ ಅಭಿರಾಮಿ
ಬಹುಭಾಷಾ ನಟಿ ಅಭಿರಾಮಿ ಅವರು ರೇಷ್ಮೇ ಬಣ್ಣದ ಸೀರೆಯುಟ್ಟು ಓಣಂಗೆ ವಿಷ್ ಮಾಡಿದ್ದಾರೆ.. 43ರಲ್ಲಿಯೂ ಅವರ ಸೌಂದರ್ಯ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
ಲಾಲಿಹಾಡು ಸಿನಿಮಾದಲ್ಲಿ ಮಿಂಚಿದ ನಟಿ
ದರ್ಶನ್ ನಟನೆಯ ಲಾಲಿ ಹಾಡು ಸಿನಿಮಾ ಮೂಲಕ ಕನ್ನಡಕ್ಕೆ ಪರಿಚಿತರಾಗಿರುವ ಅಭಿರಾಮಿ ಅವರು ಚೌಕ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಮಹಾರಾಜಾ, ಥಗ್ ಲೈಫ್, ಬ್ಲಾಸ್ಟ್, ಚೆಪ್ಪವೇ ಚಿರುಗಾಳಿ, ಮಿಡ್ಲ್ಕ್ಲಾಸ್ ಮಾಧವನ್ ಸಿನಿಮಾದಲ್ಲಿ ನಟಿಸಿದ್ದಾರೆ.
ದಿವ್ಯಾ ಗೋಪಿಕುಮಾರ್ ಮೊದಲ ಹೆಸರು
ಅಭಿ ರಾಮಿ ಅವರ ಮೊದಲ ಹೆಸರು ದಿವ್ಯಾ ಗೋಪಿಕುಮಾರ್. ಕಥಾ ಪುರುಷನ್ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಇವರು..ಶ್ರೀ ಕುಮಾರನ್ ಥಂಪಿ, ಗುಣಾ ಸಿನಿಮಾದಲ್ಲಿ ನಟಿಸಿದರು.
ದಸರಾ ಗೊಂಬೆ ಮೀನಾ
ಸಿಂಹಾದ್ರಿಯ ಸಿಂಹ, ಪುಟ್ನಂಜ, ಸ್ವಾತಿ ಮುತ್ತು, ಮೈ ಆಟೋಗ್ರಾಫ್ ಸಿನಿಮಾ ಮೂಲಕ ಮೀನಾ ಅವರು ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದಾರೆ. ಅವರ ಸಿನಿಮಾಗಳು ಇಂದಿಗೂ ಯೂಟ್ಯೂಬ್ ಇನ್ನಿತರ ವೇದಿಕೆಯಲ್ಲಿ ಸಾಕಷ್ಟು ಹೆಸರು ಮಾಡಿವೆ.