ಮಾದಕ ಲುಕ್​ನಲ್ಲಿ ಪೊರ್ಕಿ ನಟಿ ಪ್ರಣೀತಾ

ಮಮತಾ

ಮಾದಕ ಲುಕ್​ನಲ್ಲಿ ಪೊರ್ಕಿ ನಟಿ ಪ್ರಣೀತಾ

ಪೊರ್ಕಿ ಸಿನಿಮಾ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ನಟಿ ಪ್ರಣೀತಾ ಸುಭಾಷ್​ ಅವರು ಬಿಳಿ ಗೌನ್​ ತೊಟ್ಟು ರೊಮ್ಯಾಂಟಿಕ್​ ಲುಕ್​ನಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.

ಆಸಮ್​ ಬೇಬಿ ಎಂದ ಫ್ಯಾನ್ಸ್

ನೀವು ನಿಜಕ್ಕೂ ಮಗುವಿನ ತಾಯಿ ಎಂದರೆ ನಂಬಲು ಸಾಧ್ಯವೇ ಇಲ್ಲ. ಲುಕ್ಕಿಂಗ್​ ಆಸಮ್​ ಎಂದು ಹಲವರು ಕಾಮೆಂಟ್​ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜನಿಸಿ ಪ್ರಣೀತಾ ಅವರಿಗೆ ಸದ್ಯ 33 ವರ್ಷ. ಮದುವೆಯಾಗಿ ವೈವಾಹಿಕ ಜೀವನದಲ್ಲಿ ತಲ್ಲೀನರಾಗಿರುವ ದಂಪತಿಗೆ ಆರ್ನಾ ಮತ್ತು ಜೈ ಕೃಷ್ಣಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

ಸರಳ ವಿವಾಹ

ಕೋವಿಡ್​ ಕಾಲದಲ್ಲಿ ಪ್ರಣೀತಾ ಸುಭಾಷ್​ ಅವರ ಮದುವೆ ಅವರ ಆಪ್ತ ಸ್ನೇಹಿತ,. ಉದ್ಯಮಿ ನಿತಿನ್​ ಎಂವುವವರೊಂದಿಗೆ ನಡೆದಿತ್ತು. ಲಾಕ್​ಡೌನ್​ ಆಗಿದ್ದ ಕಾರಣ ಸಿಂಪಲ್​ ಆಗಿ ಸಂಬಂಧಿಕರ ನೇತೃತ್ವದಲ್ಲಿ ಮಾಡಿ ಮುಗಿಸಲಾಗಿತ್ತು.

ಪೊರ್ಕಿ ಮೂಲಕ ಕನ್ನಡಕ್ಕೆ ಎಂಟ್ರಿ

ಎಂ ಶ್ರೀಧರ್​ ನಿರ್ದೇಶನದ ಪೊರ್ಕಿ ಸಿನಿಮಾವು ತೆಲುಗಿನ ಪೋಕಿರಿಯಿಂದ ರಿಮೇಕ್​ ಆಗಿದ್ದು. ಸಿನಿಮಾದಲ್ಲಿ ಮಹೇಶ್​ ಬಾಬು ನಟಿಸಿದ್ದರು. ಈ ಸಿನಿಮಾದಲ್ಲಿ ನಾಯಕನಾಗಿ ದರ್ಶನ್​ ನಟಿಸಿದ್ದು, ಅದಕ್ಕೆ ಪ್ರಣೀತಾ ಅವರು ನಾಯಕಿಯಾಗಿ ಜೀವ ತುಂಬಿದ್ದರು. 2010ರಲ್ಲಿ ಸಿನಿಮಾ ವ್ಯಾಪಕ ಹಿಟ್​ ಕಂಡಿತ್ತು.

ಕನ್ನಡದ ಹಲವು ಸಿನಿಮಾದಲ್ಲಿ ನಟನೆ

ಭೀಮಾ ತೀರದಲ್ಲಿ, ಮಿಸ್ಟರ್​ 420, ಮಾಸ್​ ಲೀಡರ್, ಅಂಗಾರಕ​ ಸಿನಿಮಾದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡು ನಟಿಸಿದ್ದರು ಅವರ ದಪ್ಪನೆಯದಾದ ಕಣ್ಣುಗಳನ್ನು ಕಾಣುವ ಫ್ಯಾನ್ಸ್​ ಫಿದಾ ಆಗಿದ್ದರು.

ಅತ್ತಾರಿಂಟಿಕಿ ದಾರೇದಿ

ಪ್ರಣೀತಾ ಅವರ ಕಣ್ಣಿಗೆ ಮನಸೋತೋರಿಲ್ಲ. ಪವನ್​​ ಕಲ್ಯಾಣ್​ ನಟನೆಯ ಅತ್ತಾರಿಂಟಿಕಿ ದಾರೇದಿ ಸಿನಿಮಾದಲ್ಲಿ ಅವರ ಕಣ್ಣಿನ ಮೇಲೆಯೇ ಹಾಡನ್ನು ಬರೆಯಲಾಗಿತ್ತು. ಬೊಂಗರಲಾಂಟಿ ಕನ್ನು ತಿಪ್ಪಿಂದಿ, ಉಂಗರಾಲುನ್ನ ಜುಟ್ಟು ತಿಪ್ಪಿಂದಿ ಎನ್ನುವಾ ಹಾಡು ಸಾಕಷ್ಟು ಹಿಟ್​ ಆಗಿತ್ತು.

ಪ್ರಣೀತಾ ನಟನೆಯ ಸಿನಿಮಾಗಳಿವು

ಬಾವ, ಅತ್ತಾರಿಂಟಿಕಿ ದಾರೇದಿ, ಹೆಲೋ ಗುರು ಪ್ರೇಮ ಕೋಸಮೆ, ಸಗುನಿ, ರಭಸಮ ಜೆಮಿನಿ ಗಣೇಶ್ ಸುರುಳಿ ರಾಜನುಂ, ರಾಮನ ಅವತಾರ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಮದುವೆ ಮಗು ಆದ ಬಳಿಕ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಮಾತ್ರ ನಟಿ ಸಕ್ರಿಯರಾಗಿದ್ದಾರೆ.