ಸೌತ್​ ಬ್ಯೂಟಿ ಶ್ರಿಯಾ ಶರಣ್​!

ವಿನಾಯಕ ನಾಯಕ

ಸೌತ್​ ಬ್ಯೂಟಿ ಶ್ರಿಯಾ ಶರಣ್​!

ಉತ್ತರಭಾರತದಲ್ಲಿ ಜನಿಸಿದರೂ ದಕ್ಷಿಣ ಭಾರತೀಯ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ ನಟಿ ಎಂದರೆ ಅದು ಶ್ರಿಯಾ ಶರಣ್​ ಆಗಿದ್ದಾರೆ. ನಾಳೆ ನಟಿಯ ಹುಟ್ಟಿದ ದಿನವಾದ ಕಾರಣ ಇಂದು ಇನ್​ಸ್ಟಾಗ್ರಾಮ್​ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಅಡ್ವಾನ್​ ವಿಶ್​ಗಳ ಮೂಲಕ ಕಮೆಂಟ್​ ಬಾಕ್ಸ್​ನ್ನು ತುಂಬಿಸಿದ್ದಾರೆ.

ಹರಿದ್ವಾರದಲ್ಲಿ ಜನನ

ಶ್ರಿಯಾ ಶರಣ್ ಸೆಪ್ಟೆಂಬರ್ 11, 1982 ರಂದು ಉತ್ತರಾಖಂಡದ ಹರಿದ್ವಾರದಲ್ಲಿ ಜನಿಸಿದರು. ಇವರು ಭಾರತೀಯ ಸಿನಿಮಾದ ವಿವಿಧ ಭಾಷೆಗಳಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಸಿನಿಮಾ ಎಂಟ್ರಿ

ಶ್ರಿಯಾ 2001ರಲ್ಲಿ ತೆರೆಕಂಡ 'ಇಷ್ಟಂ' ಎಂಬ ತೆಲುಗು ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡಿದರು.

ಮೊದಲ ಯಶಸ್ಸು

2002ರಲ್ಲಿ ಬಿಡುಗಡೆಯಾದ 'ಸಂತೋಷಮ್' ಚಿತ್ರವು ಇವರಿಗೆ ದೊಡ್ಡ ಮಟ್ಟದ ವಾಣಿಜ್ಯ ಯಶಸ್ಸನ್ನು ತಂದುಕೊಟ್ಟಿತು ಮತ್ತು ತೆಲುಗು ಚಿತ್ರರಂಗದಲ್ಲಿ ನೆಲೆಗೊಳ್ಳಲು ಸಹಾಯ ಮಾಡಿತು.

ರಜನಿ ಜೊತೆ ನಟನೆ

ಶ್ರಿಯಾ, ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ 2007ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಚಿತ್ರ 'ಶಿವಾಜಿ: ದಿ ಬಾಸ್' ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದಲ್ಲಿ ಪ್ರಮುಖ ನಟಿಯಾದರು.

ಇತರ ಸಿನಿಮಾಗಳು

ಶ್ರಿಯಾ ತೆಲುಗು ಮತ್ತು ತಮಿಳು ಮಾತ್ರವಲ್ಲದೆ, ಹಿಂದಿಯ 'ದೃಶ್ಯಂ', 'ದೃಶ್ಯಂ 2' ಹಾಗೂ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ 'RRR' ಮುಂತಾದ ಪ್ಯಾನ್-ಇಂಡಿಯಾ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಸೋಷಿಯಲ್ ಮೀಡಿಯಾನಲ್ಲಿ ಸಕ್ರೀಯ

ನಟನೆ ಹಾಗೂ ನೃತ್ಯದ ಜೊತೆಗೆ ಶ್ರಿಯಾ ಇನ್​​ಸ್ಟಾಗ್ರಾಮ್​ ಸೇರಿದಂತೆ ಮೊದಲಾದ ಸೋಷಿಯಲ್​ ಮೀಡಿಯಾ ವೇದಿಕೆಗಳಲ್ಲಿ ಕೂಡ ಸಕ್ರೀಯರಾಗಿದ್ದಾರೆ. ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಜೀವನಕ್ಕೆ ಸಂಬಂಧಿಸಿದ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ.