ಮೂಲತಃ ಕರ್ನಾಟಕದವರೇ ಆದ ಸೌತ್ ಬ್ಯೂಟಿ ಪೂಜಾ ಹೆಗ್ಡೆ, ದಕ್ಷಿಣ ಕನ್ನಡ ಮೂಲದ ತುಳು ಭಾಷೆಯ ಕುಟುಂಬಕ್ಕೆ ಸೇರಿದವರು.2010ರ 'ಮಿಸ್ ಯೂನಿವರ್ಸ್ ಇಂಡಿಯಾ' ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ ಚೆಲುವೆ ಈಗ ಭಾರತೀಯ ಚಿತ್ರೋದ್ಯಮದಲ್ಲಿ ಸಕ್ರಿಯ.2012ರಲ್ಲಿ ನಟ ಜೀವಾ ಅಭಿನಯದ 'ಮುಗಮೂಡಿ' (ತಮಿಳು) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಅತಿ ಹೆಚ್ಚು ಸಂಭಾವನೆ ಪಡೆಯುವ ಸೌತ್ ನಟಿಯರಲ್ಲಿ ಒಬ್ಬರು.ತೆಲುಗಿನಲ್ಲಿ ನಟ ಅಲ್ಲು ಅರ್ಜುನ್ ಜತೆ ಅಲಾ ವೈಕುಂಠಪುರಮುಲೋ, ಡಿಜೆ: ದುವ್ವಾಡ ಜಗನ್ನಾಧಮ್ ಚಿತ್ರಗಳಲ್ಲಿ ಭರ್ಜರಿ ಯಶಸ್ಸು ಮತ್ತು ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು..ತಮಿಳು ನಟ ವಿಜಯ್ ಅವರ ಕೊನೆಯ ಚಿತ್ರ ಜನ ನಾಯಗನ್ನಲ್ಲಿ ನಾಯಕಿಯಾಗಿ ಮಿಂಚಿರುವ ಪೂಜಾ, ಡಿಕ್ಯೂ 41 (ತೆಲುಗು) ಮತ್ತು ಕಾಂಚಾಣ 4 ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.