ಸೌತ್​ ಬ್ಯೂಟಿ ಭಾವನಾ ಮೆನನ್​

ವಿನಾಯಕ ನಾಯಕ

ಸೌತ್​ ಬ್ಯೂಟಿ ಭಾವನಾ ಮೆನನ್​

ಚಿತ್ರರಂಗದಲ್ಲಿ ಭಾವನಾ ಮೆನನ್​ ಎಂದೇ ಗುರುತಿಸಿಕೊಂಡಿರುವ ಇವರ ಮೂಲ ಹೆಸರು ಕಾರ್ತಿಕಾ ಮೆನನ್. ಇವರು ಜೂನ್ 6, 1986 ರಂದು ಕೇರಳದ ತೃಶೂರ್‌ನಲ್ಲಿ ಜನಿಸಿದರು.

ಸಿನಿಮಾ ರಂಗಕ್ಕೆ ಪದಾರ್ಪಣೆ

ಇವರು ತಮ್ಮ 15ನೇ ವಯಸ್ಸಿನಲ್ಲಿಯೇ ನಮ್ಮಲ್ (2002) ಎಂಬ ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಕನ್ನಡ ಚಿತ್ರರಂಗಕ್ಕೆ ಎಂಟ್ರಿ

2010 ರಲ್ಲಿ ದುನಿಯಾ ಸೂರಿ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ 'ಜಾಕಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಅದ್ಧೂರಿಯಾಗಿ ಪರಿಚಯವಾದರು. ಈ ಚಿತ್ರದಲ್ಲಿನ ಇವರ 'ಲಕ್ಷ್ಮಿ' ಪಾತ್ರ ಜನಪ್ರಿಯವಾಯಿತು.

ಯಶಸ್ವಿ ಕನ್ನಡ ಚಿತ್ರಗಳು

ಜಾಕಿ ಯಶಸ್ಸಿನ ನಂತರ ಭಾವನಾ ಅವರು ಕನ್ನಡದಲ್ಲಿ ಬ್ಯಾಕ್-ಟು-ಬ್ಯಾಕ್ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ಸುದೀಪ್ ಜೊತೆ 'ವಿಷ್ಣುವರ್ಧನ', ಶಿವರಾಜ್‌ಕುಮಾರ್ ಜೊತೆ 'ಟಗರು' ಮತ್ತು 'ಭಜರಂಗಿ 2', ಗಣೇಶ್ ಜೊತೆ '99' ಮತ್ತು ಉಪೇಂದ್ರ ಜೊತೆ 'ಟೋಪಿವಾಲ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಹುಭಾಷಾ ನಟಿ

ಇವರು ಕೇವಲ ಮಲಯಾಳಂ ಮತ್ತು ಕನ್ನಡ ಮಾತ್ರವಲ್ಲದೆ, ತಮಿಳು ಹಾಗೂ ತೆಲುಗು ಭಾಷೆಗಳ ಚಿತ್ರಗಳಲ್ಲೂ ನಟಿಸಿ ದಕ್ಷಿಣ ಭಾರತದಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಇವರ ಒಟ್ಟು 80ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪ್ರಮುಖ ಪ್ರಶಸ್ತಿಗಳು

ಇವರ ಅಭಿನಯಕ್ಕಾಗಿ ಎರಡು ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ತಮಿಳಿನ 'ಚಿತ್ತಿರಂ ಪೇಸುದಡಿ' ಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.